ಸೆಪ್ಟೆಂಬರ್ ತಿಂಗಳಿನಲ್ಲಿ ಹುಟ್ಟಿದವರ ಸ್ವಭಾವ ಹೇಗಿರುತ್ತದೆ ಗೊತ್ತಾ?
ಶುಕ್ರವಾರ, 11 ಸೆಪ್ಟಂಬರ್ 2020 (07:30 IST)
ಬೆಂಗಳೂರು : ನಾವು ಹುಟ್ಟಿದ ರಾಶಿ ಪ್ರಕಾರ ಮಾತ್ರವಲ್ಲ ನಾವು ಹುಟ್ಟಿದ ತಿಂಗಳಿನ ಆಧಾರದ ಮೇಲೆ ನಿಮ್ಮ ಗುಣ ಸ್ವಭಾವವನ್ನು ತಿಳಿದುಕೊಳ್ಳಬಹುದು. ಹಾಗಾದ್ರೆ ಸೆಪ್ಟೆಂಬರ್ ತಿಂಗಳಿನಲ್ಲಿ ಹುಟ್ಟಿದವರ ಸ್ವಭಾವ ಹೇಗಿರುತ್ತದೆ ಎಂಬುದನ್ನು ತಿಳಿದುಕೊಳ್ಳೋಣ.
ನಿಮಗೆ ಕೋಪ ಜಾಸ್ತಿ ಇರುತ್ತದೆ. ಮತ್ತು ದಾನ ಧರ್ಮದಲ್ಲಿ ಹೆಚ್ಚು ಆಸಕ್ತಿ ಹೊಂದಿರುತ್ತಾರೆ. ನಿಮಗೆ ಬೇರೆಯವರು ಅವಮಾನ ಮಾಡಿದರೆ ಅದನ್ನು ಸಹಿಸುವುದಿಲ್ಲ. ಅಂತವರಿಗೆ ತಿರುಗಿ ಪ್ರತಿಕ್ರಿಯೆ ನೀಡುತ್ತೀರಿ. ಕೆಲಸದಲ್ಲಿ ಹೆಚ್ಚು ಆಸಕ್ತಿ ಹೊಂದಿರುತ್ತೀರಿ. ಹೆಚ್ಚು ಕೆಲಸ ಮಾಡುವುದರೊಳಗೆ ಸಮಯ ಕಳೆಯುತ್ತೀರಿ. ನಿಮಗೆ ಪ್ರಕೃತಿ ಎಂದರೆ ತುಂಬಾ ಇಷ್ಟ.