ವಾರದಲ್ಲಿ ಈ ಎರಡು ದಿನ ಬಳೆಗಳನ್ನು ಧರಿಸುವುದರಿಂದ ಏನಾಗುತ್ತದೆ ಗೊತ್ತಾ?

ಸೋಮವಾರ, 14 ಮೇ 2018 (07:29 IST)
ಬೆಂಗಳೂರು : ಹಿಂದಿನ ಕಾಲದಲ್ಲಿ ನಮ್ಮ ಮನೆಯಲ್ಲಿ ಅಮ್ಮ, ಅಕ್ಕ ,ತಂಗಿ ಹೀಗೆ ಎಲ್ಲರೂ ತಪ್ಪದೆ ನಮ್ಮ ಸಂಪ್ರದಾಯದಂತೆ ಕೈಗಳಿಗೆ ಬಳೆಗಳನ್ನು ಹಾಕಿಕೊಳ್ಳುತ್ತಿದ್ದರು. ಆದರೆ, ಈಗ ಕಾಲ ಸಂಪೂರ್ಣ ಬದಲಾಗಿದೆ. ಯಾವುದಾದರೂ ಕಾರ್ಯಕ್ರಮಗಳಿಗೆ ಹೋಗುವಾಗ ಅಥವಾ ವಿಶೇಷ ಸಂದರ್ಭಗಳಲ್ಲಿ ಮಾತ್ರ ಕೈಗಳಿಗೆ ಬಳೆಗಳನ್ನು ಹಾಕಿಕೊಳ್ಳುತ್ತಾರೆ.


ಗಾಜಿನ ಬಳೆಗಳಿಗೂ ನಮ್ಮ ಜೀವನಕ್ಕೂ ಅವಿನಾಭಾವ ಸಂಬಂಧವಿದೆ. ಆದರೆ, ಅನೇಕ ಕಾರಣಗಳನ್ನು ನೀಡಿ ಇಂದು ಮಹಿಳೆಯರು ಬಳೆಗಳನ್ನು ಹಾಕಿಕೊಳ್ಳುತ್ತಿಲ್ಲ. ಒಡೆದು ಹೋಗುತ್ತವೆಂದು, ಕೈಗಳಿಗೆ ಚುಚ್ಚಿಕೊಳ್ಳುತ್ತವೆಂದು. ಮನೆಯಲ್ಲಿ ಸರಿಯಾಗಿ ಕೆಲಸ ಮಾಡಲು ಆಗುವುದಿಲ್ಲವೆಂದು ಅನೇಕ ಕಾರಣಗಳನ್ನು ನೀಡುತ್ತಾರೆ. ಆದರೆ, ವಾರದಲ್ಲಿ ಈ ಎರಡು ದಿನ ಬಳೆಗಳನ್ನು ಧರಿಸುವುದರಿಂದ ಏನಾಗುತ್ತದೆ ಗೊತ್ತಾ.


ಬಳೆಗಳಿಗೆ ಚಂದ್ರನೊಂದಿಗೆ ಹಾಗೂ ಶುಕ್ರನೊಂದಿಗೆ ನೇರವಾದ ಸಂಬಂಧವಿದೆ. ಬಳೆಗಳು ಹಾಗೂ ಅವುಗಳ ಬಣ್ಣ ನಮ್ಮ ಜೀವನದ ಮೇಲೆ ಪ್ರಭಾವ ಬೀರುತ್ತವೆ. ಮಹಿಳೆಯರು,ಕೇವಲ ಹಬ್ಬ ಹರಿದಿನಗಳಲ್ಲಿ ಮಾತ್ರ ಬಳೆಗಳನ್ನು ದರಿಸುವುದರಿಂದ ನಮ್ಮ ಜೀವನದಲ್ಲಿ ಭಾಗಶ: ಸುಖ ಸಂತೋಷವನ್ನು ಕಳೆದುಕೊಂಡಂತೆಯೇ. ಆದುದರಿಂದಲೇ ವಾರಕ್ಕೆ ಎರಡು ದಿನಗಳಾದರೂ ಸರಿಯಾದ ಬಳೆಗಳನ್ನು ಧರಿಸಲು ಪ್ರಯತ್ನಿಸಿ. ಸೋಮವಾರ ಮತ್ತು ಬುಧವಾರ ತಪ್ಪದೆ ಬಳೆಗಳನ್ನು ಧರಿಸಿ. ಇದರಿಂದ ನಿಮಗೆ ಅದೃಷ್ಟ ಕೂಡಿಬರುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ