ಟೀ ಜೊತೆಗೆ ಬಿಸ್ಕತ್ ತಿನ್ನುವುದು ಉತ್ತಮ ಅಭ್ಯಾಸವೇ. ಈ ಬಗ್ಗೆ ತಜ್ಞರು ಏನು ಹೇಳುತ್ತಾರೆ ಗೊತ್ತಾ
ಭಾನುವಾರ, 13 ಮೇ 2018 (07:07 IST)
ಬೆಂಗಳೂರು : ಭಾರತದಲ್ಲಿ ಅತಿ ಸಾಮಾನ್ಯವಾದ ಧಿಡೀರ್ ತಿಂಡಿ ಎಂದರೆ ಟೀ ಮತ್ತು ಬಿಸ್ಕತ್. ಹೆಚ್ಚಿನವರು ಸಂಜೆಯ ಹೊತ್ತಿಗೆ ಇದನ್ನು ಸೇವಿಸುತ್ತಾರೆ. ಆದರೆ ಇದು ಆರೋಗ್ಯಕ್ಕೆ ಉತ್ತಮ ಹೌದೋ ಅಥವಾ ಅಲ್ಲವೋ ಎಂಬ ಗೊಂದಲ ಹಲವರಲ್ಲಿದೆ. ಇದಕ್ಕೆ ಉತ್ತರ ಇಲ್ಲಿದೆ ನೋಡಿ
ಟೀ ಮತ್ತು ಬಿಸ್ಕತ್ ತಿನ್ನುವುದು ಉತ್ತಮ ಅಭ್ಯಾಸ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. ಬಿಸ್ಕತ್ ಬದಲಿಗೆ ಟೋಸ್ಟ್, ರಸ್ಕ್ ಮೊದಲಾದವುಗಳನ್ನೂ ಸೇವಿಸಬಹುದು. ಇವುಗಳಲ್ಲಿರುವ ಹಿಟ್ಟಿನ ಅಂಶ ಟೀ ಯಲ್ಲಿರುವ ಆಮ್ಲೀಯತೆಯನ್ನು ಹೀರಿಕೊಳ್ಳುವ ಕಾರಣ ಜೀರ್ಣರಸಗಳು ಹೆಚ್ಚು ಪ್ರಭಾವಕ್ಕೊಳಗಾಗುವುದಿಲ್ಲ. ಟೀ ಒಟ್ಟಿಗೆ ಸಿಹಿ ಅಥವಾ ಉಪ್ಪಿನ ಅಂಶವಿರುವ ತಿಂಡಿಗಳನ್ನು ತಿನ್ನುವ ಮೂಲಕ ದೇಹಕ್ಕೆ ಅಗತ್ಯವಾದ ಸೋಡಿಯಂ ಅಂಶವನ್ನು ಪಡೆದುಕೊಂಡು ಹೊಟ್ಟೆಯ ಮತ್ತು ಕರುಳಿನ ಹುಣ್ಣು (ಅಲ್ಸರ್) ನಿಂದ ಪಾರಾಗಬಹುದು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ