ಮಕ್ಕಳು ಪೊರಕೆಯನ್ನು ಕೈಯಲ್ಲಿ ಹಿಡಿದ್ರೆ ಏನಾಗುತ್ತೆ ಗೊತ್ತಾ?
ಮಂಗಳವಾರ, 29 ಜನವರಿ 2019 (08:32 IST)
ಬೆಂಗಳೂರು : ಮನೆಯನ್ನು ಕ್ಲೀನ್ ಮಾಡಲು ಪೊರಕೆಯನ್ನು ಬಳಸುತ್ತೇವೆ. ಈ ಪೊರಕೆಯನ್ನು ಲಕ್ಷ್ಮೀ ದೇವಿಗೆ ಹೋಲಿಸಲಾಗಿದೆ. ಹಾಗೇ ಮನೆಯಲ್ಲಿ ಪೊರಕೆ ಹೇಗಿಡಬೇಕು, ಪೊರಕೆಯನ್ನು ಹೇಗೆ ಬಳಕೆ ಮಾಡಬೇಕು, ಹೀಗೆ ಪೊರಕೆಗೆ ಸಂಬಂಧಿಸಿದ ಅನೇಕ ವಿಷಯಗಳನ್ನು ವೈದಿಕ ಧರ್ಮದಲ್ಲಿ ವಿವರವಾಗಿ ಹೇಳಲಾಗಿದೆ.
ಪೊರಕೆಗೆ ಸಂಬಂಧಿಸಿದಂತೆ ಹಲವು ನಂಬಿಕೆಗಳಿವೆ. ಮಕ್ಕಳು ಆಟಾಡುತ್ತಿರುವಾಗ ತಮ್ಮ ಆಟದ ಸಾಮಗ್ರಿ ಬಿಟ್ಟು ಪೊರಕೆ ಹಿಡಿದಲ್ಲಿ ಅದಕ್ಕೊಂದು ವಿಶೇಷ ಅರ್ಥವಿದೆ. ಕೆಲವೊಮ್ಮೆ ಮನೆಯವರನ್ನು ಅನುಕರಿಸುವ ಮಕ್ಕಳು ಪೊರಕೆ ಹಿಡಿದು ಮನೆ ಸ್ವಚ್ಛತೆಗೆ ಮುಂದಾಗ್ತಾರೆ. ಇದು ಮನೆಗೆ ಅತಿಥಿಗಳು ಬರುತ್ತಾರೆನ್ನುವ ಸಂಕೇತ.
ಆ ವೇಳೆ ಮನೆಗೆ ಬರುವ ಅತಿಥಿಗಳಿಂದ ಆರ್ಥಿಕ ಲಾಭವಾಗಲಿದೆ ಇಲ್ಲವೆ ಬೇರೆ ಯಾವುದೋ ಮೂಲದಿಂದ ಮನೆಗೆ ಹಣ ಹರಿದು ಬರಲಿದೆ ಎಂಬ ಸಂಕೇತವನ್ನು ಮಕ್ಕಳು ನೀಡುತ್ತಾರೆಂದು ನಂಬಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.