ಸರಸ್ವತಿ ದೇವಿಗೆ ಸಂಬಂಧಪಟ್ಟ ಈ ವಸ್ತುಗಳು ಮನೆಯಲ್ಲಿದ್ದರೆ ಏನಾಗುತ್ತದೆ ಗೊತ್ತಾ?

ಭಾನುವಾರ, 3 ಮಾರ್ಚ್ 2019 (07:32 IST)
ಬೆಂಗಳೂರು : ವಿದ್ಯೆಗೆ ಅಧಿದೇವತೆಯಾದ ಸರಸ್ವತಿ ದೇವಿ ಮನೆಯಲ್ಲಿ ನೆಲೆಸಿದ್ದರೆ ವಿದ್ಯೆಗೆ ಯಾವ ಕೊರತೆ ಇರುವುದಿಲ್ಲವೆನ್ನುತ್ತಾರೆ. ಅಷ್ಟು  ಮಾತ್ರವಲ್ಲ ಮಾತೆ ಸರಸ್ವತಿಗೆ ಸಂಬಂಧಿಸಿದ ಕೆಲವೊಂದು ವಸ್ತುಗಳು ಮನೆಯಲ್ಲಿದ್ದರೆ ಸಾಕು ವಾಸ್ತುದೋಷ ಕೂಡ ನಿವಾರಣೆಯಾಗುತ್ತದೆಯಂತೆ.


ವೀಣೆ: ಮಾತೆ ಸರಸ್ವತಿಯ ಅತ್ಯಂತ ಪ್ರೀತಿಯ ವಸ್ತುಗಳಲ್ಲಿ ವೀಣೆ ಒಂದು. ಈ ಪವಿತ್ರವಾದ ವೀಣೆ ಮನೆಯಲ್ಲಿದ್ದರೆ ಸುಖ-ಶಾಂತಿ, ಸಮೃದ್ಧಿ ನೆಲೆಸುತ್ತದೆಯಂತೆ.


ಹಂಸ: ಸರಸ್ವತಿ ದೇವಿಯ ವಾಹನವಾದ ಹಂಸದ ಚಿತ್ರ ಅಥವಾ ಶೋ ಪೀಸ್ ಮನೆಯಲ್ಲಿದ್ದರೆ ಅಲ್ಲಿ ಶಾಂತಿ-ನೆಮ್ಮದಿ ಇರುತ್ತದೆಯಂತೆ.


ನವಿಲುಗರಿ: ಅನೇಕ ದೇವಾನುದೇವತೆಗಳಿಗೆ ಸಂಬಂಧಿಸಿದ ವಸ್ತು ನವಿಲುಗರಿ. ಮನೆಯಲ್ಲಿ ನವಿಲುಗರಿ ಇಡುವುದು ಶುಭಕರ. ದೇವರ ಮನೆ ಹಾಗೂ ಮಕ್ಕಳ ರೂಮಿನಲ್ಲಿ ನವಿಲುಗರಿಯಿಡಬೇಕು. ಇದು ನಕಾರಾತ್ಮಕ ಶಕ್ತಿಯನ್ನು ಹೊಡೆದೋಡಿಸುತ್ತದೆ.
ಕಮಲದ ಹೂವು : ದೇವರ ಪೂಜೆಗೆ ಎಲ್ಲ ಹೂವುಗಳ ಜೊತೆ ಕಮಲದ ಹೂವನ್ನು ಬಳಸಬೇಕು. ಯಾಕೆಂದರೆ ಕಮಲದ ಹೂವು ಮನೆಯ ಸುಖ-ಸಮೃದ್ಧಿಗೆ ಕಾರಣವಾಗುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ