ಯಾವ ರಾಶಿಯವರಿಗೆ ಯಾವ ರಾಶಿಯವರು ತಕ್ಕ ಜೋಡಿ ಎಂಬುದು ತಿಳಿಬೇಕಾ?

ಶನಿವಾರ, 2 ಮಾರ್ಚ್ 2019 (08:34 IST)
ಬೆಂಗಳೂರು : ಹೆಚ್ಚಿನವರು ಮದುವೆಯಾಗಲು ಹುಡುಗ ಹುಡುಗಿ ಜಾತಕ ಹೊಂದಾಣಿಕೆಯಾಗುತ್ತದೆಯೇ ಎಂದು ನೋಡುತ್ತಾರೆ. ಯಾಕೆಂದರೆ ಹುಡುಗ ಹಾಗೂ ಹುಡುಗಿಯ ರಾಶಿ ಹೊಂದಾಣಿಕೆಯಾದರೆ ಮಾತ್ರ ಅವರ ದಾಂಪತ್ಯ ಜೀವನ ಸುಖಕರವಾಗಿರುತ್ತದೆ ಎಂಬುದು ನಂಬಿಕೆ. ಆದ್ದರಿಂದ ಯಾವ ರಾಶಿಯವರಿಗೆ ಯಾವ ರಾಶಿಯವರು ಸಂಗಾತಿಯಾಗುತ್ತಾರೆ ಎಂಬ ಮಾಹಿತಿ ಇಲ್ಲಿದೆ ನೋಡಿ.


ಮೇಷ ರಾಶಿ: ಸಿಂಹ ಇಲ್ಲವೇ ಧನಸ್ಸು ರಾಶಿಯವರು ತಕ್ಕ ಜೋಡಿಯಾಗಲಿದ್ದಾರೆ. ಕಟಕ, ಮೀನ ಹಾಗೂ ವೃಷಭ ರಾಶಿಯವರು ನಿಮ್ಮ ರಾಶಿಗೆ ಸರಿಹೊಂದುವುದಿಲ್ಲ.


ವೃಷಭ : ಈ ರಾಶಿಯವರಿಗೆ ಕನ್ಯಾ ಹಾಗೂ ಮಕರ ರಾಶಿಯವರು ತಕ್ಕ ಜೋಡಿಯಾಗುವುದಿಲ್ಲ. ಆದರೆ ಕಟಕ, ಮೀನ ಹಾಗೂ ವೃಶ್ಚಿಕ ರಾಶಿಯವರು ಜೋಡಿಯಾದರೆ ಜೀವನ ಚೆನ್ನಾಗಿರುತ್ತದೆ.


ಮಿಥುನ : ಈ ರಾಶಿಯವರು  ಧನಸ್ಸು, ಮಕರ ಹಾಗೂ ಕುಂಭ ರಾಶಿಯವರು ಮದುವೆಯಾದರೆ ಜೀವನದಲ್ಲಿ ಯಶಸ್ಸು ಹೊಂದುತ್ತಾರೆ.


ಕಟಕ :  ಈ ರಾಶಿಯವರಿಗೆ ವೃಶ್ಚಿಕ, ಮಕರ ಹಾಗೂ ಕನ್ಯ ರಾಶಿಯವರು ಸರಿಯಾದ ಜೋಡಿ. ಆದರೆ ಸುಖಕರವಾದ ವಿಲಾಸಿ ಜೀವನ  ಬೇಕಾದವರು ಮೇಷ ಹಾಗೂ ತುಲಾ ರಾಶಿಯವರನ್ನು ಮದುವೆಯಾದರೆ ಉತ್ತಮ.


ಸಿಂಹ : ಮಿಥುನ, ತುಲಾ ಹಾಗೂ ಕುಂಭ ರಾಶಿಯವರು ಸಿಂಹ ರಾಶಿಯವರಿಗೆ ಜೋಡಿಯಾಗಲಿದ್ದಾರೆ.


ಕನ್ಯಾ : ಈ ರಾಶಿಯವರು ಜೀವನದಲ್ಲಿ ಸಂತೋಷವಾಗಿರಲು ಕಟಕ, ವೃಶ್ಚಿಕ ಹಾಗೂ ಮೀನ ರಾಶಿಯವರನ್ನು ಆಯ್ಕೆ ಮಾಡಿ

ತುಲಾ : ಇವರಿಗೆ ಮೇಷ, ಸಿಂಹ ಹಾಗೂ ಧನಸ್ಸು ರಾಶಿಯವರು ಸರಿಯಾದ ಜೋಡಿ.

ವೃಶ್ಚಿಕ : ನಿಮ್ಮ ರಾಶಿಯವರೇ ನಿಮಗೆ ತಕ್ಕ ಜೋಡಿ. ಆದರೆ ಜೀವನದಲ್ಲಿ ಖುಷಿಯಾಗಿರಲು ಕನ್ಯಾ ಹಾಗೂ ಮಕರ ರಾಶಿಯವರನ್ನು ಮದುವೆಯಾಗಿ.


ಧನು : ನಿಮಗೆ ಮಿಥುನ, ತುಲಾ, ಕುಂಭ ರಾಶಿಯವರು ಉತ್ತಮ ಜೋಡಿಯಾಗುತ್ತಾರೆ.


ಮಕರ : ಕಟಕ, ವೃಶ್ಚಿಕ ಹಾಗೂ ಮೀನ ರಾಶಿಯವರು ನಿಮಗೆ ತಕ್ಕ ಜೋಡಿಯಾಗುತ್ತಾರೆ.


ಕುಂಭ : ನಿಮ್ಮ ಸಂಬಂಧ ಗಟ್ಟಿಯಾಗಿರಲು ಮೇಷ, ಸಿಂಹ, ಧನಸ್ಸು ರಾಶಿಯವರನ್ನು ವಿವಾಹವಾಗಿ.
ಮೀನ : ನಿಮಗೆ ವೃಶ್ಚಿಕ, ಕನ್ಯಾ ಹಾಗೂ ಮಕರ ರಾಶಿಯವರು ಸರಿಯಾದ ಜೋಡಿ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ