ಇಂದು ಎಲ್ಲೆಲ್ಲೂ ವರಮಹಾಲಕ್ಷ್ಮಿ ಪೂಜೆ ಸಂಭ್ರಮ: ಈ ವೃತಾಚರಣೆಯಿಂದ ವಿಶೇಷ ಫಲ ಪ್ರಾಪ್ತಿ

Sampriya

ಶುಕ್ರವಾರ, 8 ಆಗಸ್ಟ್ 2025 (10:25 IST)
Photo Credit X
ಇಂದು ಎಲ್ಲೆಲ್ಲೂ ವರಮಹಾಲಕ್ಷ್ಮಿ ಪೂಜೆ ಸಂಭ್ರಮ. ಮನೆಮನೆಗಳಲ್ಲೂ, ಸಾರ್ವಜನಿಕ ಸ್ಥಳಗಳಲ್ಲೂ ಶ್ರದ್ಧೆಯಿಂದ ಈ ಹಬ್ಬವನ್ನು ಆಚರಿಸಲಾಗುತ್ತಿದೆ. ಈ ಹಬ್ಬದ ಆಚರಣೆ ಹೇಗೆ ನಡೆಯುತ್ತದೆ, ಈ ವೃತಾಚರಣೆಯಿಂದ ಏನೆಲ್ಲಾ ಲಾಭಗಳಿವೆ ನೋಡೋಣ.

ವರಮಹಾಲಕ್ಷ್ಮಿ ವೃತಾಚರಣೆಯು ಹೆಂಗಳೆಯರ ಹಬ್ಬ. ಪ್ರತಿವರ್ಷ ಈ ಹಬ್ಬವನ್ನು ಆಚರಿಸಲು ಗೃಹಿಣಿಯರು ಕಾಯುತ್ತಿದ್ದಾರೆ. ಈ ಬಾರಿ ಆಗಸ್ಟ್‌ 8ರಂದು (ಇಂದು) ವರಮಹಾಲಕ್ಷ್ಮಿ ಹಬ್ಬವನ್ನು ಎಲ್ಲೆಲ್ಲೂ ಆಚರಿಸಲಾಗುತ್ತಿದೆ. 

ಹೆಣ್ಣು ಮಕ್ಳಳು ಈ ಹಬ್ವನ್ನು ಆಚರಿಸಿ ತಮ್ಮ ನೆರೆ ಹೊರೆಯವರನ್ನು, ಬಂಧುಗಳನ್ನು ಮನೆಗೆ ಆಹ್ವಾನಿಸುತ್ತಾರೆ. ಮನೆಯಲ್ಲಿ ಸುಖ , ಸಂಪತ್ತು, ಸಮೃದ್ಧಿ ನೆಲೆಸಲಿ ಎಂದು ಪ್ರಾರ್ಥಿಸುತ್ತಾರೆ. ಹೆಸರೇ ಹೇಳುವಂತೆ ಬೇಡಿದ ಭಕ್ತರಿಗೆ ವರವನ್ನು ಕರುಣಿಸುವ ವರಮಹಾಲಕ್ಷ್ಮಿ ಹಬ್ಬಕ್ಕೆ ವಿಶೇಷ ಮಹತ್ವವಿದೆ. 

ಪ್ರತಿ ಸಂವತ್ಸರದಲ್ಲಿಯೂ ಶ್ರಾವಣ ಮಾಸದ ಶುಕ್ಲಪಕ್ಷದಲ್ಲಿನ ಎರಡನೆ ಶುಕ್ರವಾರದ ದಿನ ವರಮಹಾಲಕ್ಷ್ಮಿ ವ್ರತವನ್ನು ಆಚರಿಸುತ್ತೇವೆ. ಪೂಜೆ ಎಂದರೆ ಒಮ್ಮೆ ಆಚರಿಸದೆ ಹೋದರೂ ಯಾವುದೇ ತೊಂದರೆ ಉಂಟಾಗುವುದಿಲ್ಲ. ಆದರೆ ವ್ರತ ಎಂದರೆ ಕೇವಲ ನಿಗದಿಗೊಳಿಸಿದ ದಿನದಂದು ಆಚರಿಸಬೇಕಾಗುತ್ತದೆ. ಯಾವುದೇ ಕಾರಣಕ್ಕೂ ಯಾವುದೇ ವ್ರತವನ್ನು ಮಾಡದೆ ನಿಲ್ಲಿಸಬಾರದು. ಕೆಲವು ಧಾರ್ಮಿಕ ಗ್ರಂಥಗಳ ಅನುಸಾರ ವ್ರತವನ್ನು ಆಚರಿಸಲು ಸಾಧ್ಯವಾಗದೆ ಇದ್ದರೂ ಆತ್ಮೀಯರ ಅಥವಾ ಸಂಬಂಧಿಕರಿಂದ ಪೂಜೆಮಾಡಿಸಿದ ದಾರವನ್ನು ಧರಿಸುವುದು ಒಳ್ಳೆಯದು.

ರ ಮಹಾಲಕ್ಷ್ಮಿ ವ್ರತಾಚರಣೆಯಂದು ಪೂಜೆ ಮಾಡುವುದರಿಂದ ವಿಶೇಷವಾದ ಫಲಗಳನ್ನು ಪಡೆಯಬಹುದು. ಲಕ್ಷ್ಮಿಯನ್ನು ಪ್ರಜ್ವಲಿಸುತ್ತಿರುವ ದೀಪದಲ್ಲಿ ಕಾಣುತ್ತೇವೆ. ಆರೋಗ್ಯಪೂರ್ಣ ವಿಳ್ಳೆದೆಲೆಯಲ್ಲಿ ಕಾಣುತ್ತೇವೆ. ಹಾಗೆಯೇ ಅರಿಶಿಣದ ದಾರ ಅಥವಾ ಬಟ್ಟೆಯಲ್ಲಿ ಕಟ್ಟಿರುವ ಅರಿಶಿಣದ ಕೊಂಬಿನಲ್ಲಿಯೂ ಕಾಣುತ್ತೇವೆ. ಆದರೆ ಈ ವ್ರತದಲ್ಲಿ ಕಳಶವನ್ನು ಇಟ್ಟು ಪೂಜಿಸುತ್ತೇವೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ