ಉಗುರು ಮತ್ತು ಕೂದಲು ಕಟ್ ಮಾಡಲು ಯಾವ ದಿನ ಪ್ರಶಸ್ತವಾದದ್ದು ಗೊತ್ತಾ…?

ಬುಧವಾರ, 10 ಜನವರಿ 2018 (07:24 IST)
ಬೆಂಗಳೂರು : ಉಗುರು ಮತ್ತು ಕೂದಲು ಎಷ್ಟೇ ಕತ್ತರಿಸಿದರೂ ಮತ್ತೆ ಮತ್ತೆ ಹುಟ್ಟಿಬರುತ್ತವೆ. ಆರೋಗ್ಯದ ದೃಷ್ಟಿಯಿಂದ ಇವೆರಡನ್ನೂ ಸ್ವಚ್ಚವಾಗಿಟ್ಟುಕೊಳ್ಳಬೇಕು. ಹಾಗಂತ ನಮಗೆ ಅನುಕೂಲವಾದ ದಿನ ಉಗುರು ತೆಗೆಯುವುದು, ಕೂದಲಿಗೆ ಕತ್ತರಿ ಹಾಕುವುದು ಒಳ್ಳೆಯದಲ್ಲ. ಮಹಾಭಾರತದಲ್ಲಿ ಉಗುರು ಮತ್ತು ಕೂದಲನ್ನು ಯಾವಾಗ ಕತ್ತರಿಸಿಕೊಂಡರೆ ಶುಭ ಎಂದು ಉಲ್ಲೇಖಿಸಲಾಗಿದೆ.

 
ಮಕ್ಕಳಿಗೆ ಸ್ಕೂಲ್ ಗೆ ಹೋಗುವಾಗ ಉಗುರು ತೆಗೆಯಬೇಕೆಂದು ಕೆಲವರು ಸೋಮವಾರ ಉಗುರು ಕಟ್ ಮಾಡುತ್ತಾರೆ. ಆದರೆ ಸೋಮವಾರ ಉಗುರು ಮತ್ತು ಕೂದಲು ಕಟ್ ಮಾಡಿದರೆ ಮಾನಸಿಕ ಹಾಗು ಸಂತಾನದ ಸಮಸ್ಯೆ ಎದುರಾಗುತ್ತದೆ ಎಂದು ಪುರಾಣದಲ್ಲಿ ತಿಳಿಸಲಾಗಿದೆ. ಹಾಗೆ ಮಂಗಳವಾರ ಈ ಕೆಲಸಗಳನ್ನು ಮಾಡಿದರೆ ಆಯಸ್ಸು ಕಡಿಮೆಯಾಗುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಬುಧವಾರ  ಉಗುರು ಮತ್ತು ಕೂದಲು ಕಟ್ ಮಾಡಲು ಉತ್ತಮವಾದ ದಿನವಾಗಿದೆ. ಈ ದಿನ ಉಗುರು ಮತ್ತು ಕೂದಲು ತೆಗೆದರೆ ಸಂಪತ್ತು ಜಾಸ್ತಿಯಾಗುವುದರ ಜೊತೆಗೆ ಕುಟುಂಬದಲ್ಲಿ ಶಾಂತಿ ನೆಲೆಸುತ್ತದೆ.



ಹಾಗೆ ಗುರುವಾರ ಉಗುರು ಮತ್ತು ಕೂದಲುನ್ನು ತೆಗೆಯಬಾರದು ಎಂದು ಶಾಸ್ತ್ರ ಹೇಳುತ್ತದೆ. ಇದು ಗುರುವಿನ ದಿನವಾದ್ದರಿಂದ ಅಶುಭ ಕೆಲಸ ಮಾಡಿದ್ರೆ ಜ್ಞಾನ ವೃದ್ದಿಯಾಗುವುದಿಲ್ಲ. ಶುಕ್ರವಾರ ಈ ಕೆಲಸ ಮಾಡಿದರೆ ತುಂಬಾ ಒಳ್ಳೆಯದು. ಯಾಕೆಂದರೆ ಶುಕ್ರದೇವಾ ಸೌಂದರ್ಯಕ್ಕೆ ಪ್ರತೀಕವಾದ್ದರಿಂದ ಅಂದು ದೈಹಿಕ ಸ್ವಚ್ಚತೆ ಮಾಡಿಕೊಂಡರೆ ಶುಕ್ರ ದೇವ ಪ್ರಸನ್ನನಾಗುತ್ತಾನೆ. ಹಾಗೆ  ಮನೆಯಲ್ಲಿ ಲಕ್ಷ್ಮೀ ಕೂಡ ನೆಲೆಸುತ್ತಾಳಂತೆ. ಇನ್ನು ಶನಿವಾರ ಯಾವುದೇ ಕಾರಣಕ್ಕೂ ಶೌರ ಮಾಡಬಾರದು. ಒಂದುವೇಳೆ ಮಾಡಿದರೆ ಸಾವನ್ನು ಹತ್ತಿರ ಕರೆದಂತೆ. ಕೊನೆಯದಾಗಿ ಭಾನುವಾರ ಎಲ್ಲರಿಗೂ ರಜಾದ ದಿನವಾದ್ದರಿಂದ ಅಂದು ಎಲ್ಲರೂ ಈ ಕೆಲಸಗಳನ್ನು ಮಾಡುತ್ತಾರೆ. ಆದರೆ ಅಂದು ಈ ಕೆಲಸಮಾಡುವುದು ಶುಭಕರವಲ್ಲ ಎಂದು ಶಾಸ್ತ್ರಗಳು ಹೇಳುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ