ಸತ್ತವರ ತಲೆ ಬಳಿ ದೀಪವನ್ನು ಬೆಳಗುವುದ್ಯಾಕೆ ಗೊತ್ತಾ?

ಭಾನುವಾರ, 26 ಆಗಸ್ಟ್ 2018 (11:01 IST)
ಬೆಂಗಳೂರು : ಹಿಂದೂಗಳಿಗೆ ದೀಪ ಅತ್ಯಂತ ಪವಿತ್ರವಾದದ್ದು. ಹಾಗಾಗಿ ಯಾವುದೇ ಶುಭಕಾರ್ಯ ಆರಂಭಿಸುವುದಕ್ಕೂ ಮುನ್ನ ದೀಪಾರಾಧನೆಯೊಂದಿಗೆ ಆರಂಭಿಸುತ್ತಾರೆ. ಅಲ್ಲದೇ ಹಿಂದೂಗಳಲ್ಲಿ ಯಾರಾದರೂ ಮೃತಪಟ್ಟರೆ ತಲೆ ಬಳಿ ದೀಪವನ್ನು ಬೆಳಗುತ್ತಾರೆ. ಅಷ್ಟೇ ಅಲ್ಲ ಆ ದೀಪ ನಂದಿ ಹೋಗದಂತೆ ಎಚ್ಚರದಿಂದ ನೋಡಿಕೊಳ್ಳುತ್ತಾರೆ. ಅಷ್ಟೆಲ್ಲಾ ಶಕ್ತಿ ಇರುವ ದೀಪವನ್ನು ಮೃತಪಟ್ಟವರ ತಲೆ ಬಳಿ ಯಾಕೆ ಇಡುತ್ತಾರೆ ಗೊತ್ತಾ


ನಾವು ಬದುಕಿದ್ದಾಗ ದೀಪ ಕತ್ತಲೆಯಲ್ಲಿ ಹೇಗೆ ದಾರಿ ತೋರುತ್ತದೋ ಅದೇ ರೀತಿ ಸತ್ತ ಬಳಿಕ ಸಹ ದೀಪ ಮೋಕ್ಷ ಮಾರ್ಗ ತೋರುತ್ತದೆ ಎನ್ನುತ್ತಾರೆ. ಆದರೆ ಮರಣಿಸಿದ ಬಳಿ ಆವರ ಆತ್ಮ ಬ್ರಹ್ಮ ಕಪಾಲದಿಂದ ಹೊರಗೆ ಬಂದರೆ ಅವರ ಆತ್ಮಕ್ಕೆ ಮೋಕ್ಷ ಮಾರ್ಗ ಸಿಗುತ್ತದೆಂದು ನಮ್ಮ ಪುರಾಣಗಳು ಹೇಳುತ್ತಿವೆ.


ಮರಣಿಸಿದ ಬಳಿಕ ಬ್ರಹ್ಮ ಕಪಾಲದ ಮೂಲಕ ದೇಹದಿಂದ ಹೊರಗೆ ಬಂದ ಬಳಿಕ ಆತ್ಮ ಮೋಕ್ಷ ಮಾರ್ಗಕ್ಕೆ ಹೋಗಲು ಎರಡು ಮಾರ್ಗಗಳಿವೆ. ಒಂದು ಉತ್ತರ ಮಾರ್ಗ, ಎರಡು ದಕ್ಷಿಣ ಮಾರ್ಗ. ದಕ್ಷಿಣ ಮಾರ್ಗದಲ್ಲಿ ಕತ್ತಲಿರುತ್ತದೆ. ಆದರೆ ಈ ರೀತಿ ತಲೆ ಬಳಿ ಇರುವ ದೀಪ ಬೆಳಕು ತೋರಿಸಿ ಸಹಾಯ ಮಾಡುತ್ತದೆ. ಹಾಗಾಗಿ ಮರಣಿಸಿದ ಬಳಿಕ ತಲೆ ಬಳಿ ದೀಪ ಇಡುವುದು ಸಂಪ್ರದಾಯ ಎಂದು ಪುರಾಣಗಳು ಹೇಳುತ್ತಿವೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ