ಸಿಲಿಕಾನ್ ಸಿಟಿಗೆ ಬರುತ್ತಾರಂತೆ ದೀಪಿಕಾ-ರಣವೀರ್ ಜೋಡಿ. ಯಾಕೆ ಗೊತ್ತಾ?

ಶನಿವಾರ, 25 ಆಗಸ್ಟ್ 2018 (12:16 IST)
ಬೆಂಗಳೂರು : ಸದ್ಯದಲ್ಲೇ ಹಸೆಮಣೆ ಏರಲಿರುವ ಬಾಲಿವುಡ್‌ ಬೆಡಗಿ ದೀಪಿಕಾ ಪಡುಕೋಣೆ ಹಾಗೂ ನಟ ರಣವೀರ್‌ ಸಿಂಗ್‌ ಅವರು ನವೆಂಬರ್‌ 20ಕ್ಕೆ ಬೆಂಗಳೂರಿಗೆ ಆಗಮಿಸಲಿದ್ದಾರಂತೆ.


ಹೌದು. ಬೆಂಗಳೂರಿನಲ್ಲಿರುವ ದೀಪಿಕಾ ಅವರ ನಿವಾಸದಲ್ಲಿ ವಿಶೇಷ ನಂದಿ ಪೂಜೆ ಹಮ್ಮಿಕೊಳ್ಳಲಾಗಿದ್ದು, ಈ ಕಾರಣದಿಂದ ನಟಿ ದೀಪಿಕಾ ಪಡುಕೋಣೆ ಹಾಗೂ ನಟ ರಣವೀರ್‌ ಸಿಂಗ್‌ ಬೆಂಗಳೂರಿಗೆ ಬರುತ್ತಾರೆ ಎಂಬ ಮಾಹಿತಿ ತಿಳಿದುಬಂದಿದೆ.


ಈ ಬಗ್ಗೆ ದೀಪಿಕಾ ಪಡುಕೋಣೆ ಅವರ ತಾಯಿ ಉಜ್ಜಲಾ ಪಡುಕೋಣೆ ಅವರು ನಂದಿ ದೇವಸ್ಥಾನದ ಅರ್ಚಕರೆ ಜೊತೆ ಮಾತುಕತೆ ನಡೆಸಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ದೀಪಿಕಾ ಹಾಗೂ ರಣವೀರ್‌ ಅವರು ಇಟಲಿಯ ಲೇಕ್‌ ಕೊಮೊ ಎಂಬಲ್ಲಿ ವಿವಾಹ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ