ವಧು ಅಕ್ಕಿ ತುಂಬಿದ ಸೇರಿನ ಪಾತ್ರೆ ಒದ್ದು ಮನೆ ಪ್ರವೇಶಿಸುವುದು ಯಾಕೆ ಗೊತ್ತಾ?
ಸೋಮವಾರ, 19 ಫೆಬ್ರವರಿ 2018 (07:02 IST)
ಬೆಂಗಳೂರು : ವಧು ವಿವಾಹದ ನಂತರ ಪತಿಯ ಮನೆಯನ್ನು ಮೊದಲ ಬಾರಿಗೆ ಪ್ರವೇಶಿಸುವಾಗ ಮೊದಲು ಆರತಿ ಮಾಡಲಾಗುತ್ತದೆ. ನಂತರ ಹೊಸಲಿನ ಮೇಲೆ ಅಕ್ಕಿ ತುಂಬಿದ ಸೇರಿನ ಪಾತ್ರೆ ಇಟ್ಟು ಅದನ್ನು ನಿಧಾನವಾಗಿ ಬಲಗಾಲಿನಿಂದ ತಳ್ಳುವಂತೆ ಹೇಳಲಾಗುತ್ತದೆ.
ಈ ಪದ್ಧತಿಗೂ ಒಂದು ಕಾರಣವಿದೆ. ಅದೇನೆಂದರೆ ಗೃಹಿಣಿ, ಮಹಿಳೆ, ಕನ್ಯೆಯರನ್ನು ಭಾರತೀಯ ಸಂಸ್ಕೃತಿಯಲ್ಲಿ ದೇವಿ ಲಕ್ಷ್ಮಿಯ ಸ್ವರೂಪವೆಂದೇ ಪರಿಗಣಿಸಲಾಗುತ್ತದೆ. ವಿವಾಹವಾದ ವಧುವನ್ನೂ ಸಹ ಪತಿಯ ಮನೆ ಲಕ್ಷ್ಮಿ ಎಂದೆ ಹೇಳುತ್ತಾರೆ. ಅಂತೆಯೇ ದೇವಿ ಲಕ್ಷ್ಮಿ (ಸಂಪತ್ತು, ಸಂಭೃದ್ಧಿ) ಮನೆ ಪ್ರವೇಶಿಸುವುದು ಬಾಗಿಲ ಹೊಸ್ತಿಲಿನ ಮೂಲಕವೇ ಆದ್ದರಿಂದ ಲಕ್ಷ್ಮಿಯ ಸಾನ್ನಿಧ್ಯವೂ ಹೊಸ್ತಿಲಿನ ಮೇಲೆಯೇ ಇರುತ್ತದೆ.
ಇನ್ನು ಅಕ್ಕಿ ಸಂಭೃದ್ಧಿಯ ಸೂಚಕವಾಗಿದ್ದು, ವಿವಾಹವಾಗಿ ಬಂದ ನವ ವಧು ಹೊಸ್ತಿಲಿನ ಮೇಲಿರುವ ಅಕ್ಕಿ ತುಂಬಿದ ಸೇರಿನ ಪಾತ್ರೆಯನ್ನು ನಿಧಾನವಾಗಿ ಬಲಗಾಲಿನಿಂದ ತಳ್ಳಿದರೆ ಸಂಭೃದ್ಧಿಯ ಸಂಕೇತವಾಗಿರುವ ಅಕ್ಕಿ ಮನೆತುಂಬ ಹರಡಿ, ಅಕ್ಕಿಯಂತೆ ಸುಭೃದ್ಧಿಯೂ ಮನೆ ತುಂಬ ಹರಡಲಿ ಎಂಬ ತತ್ವ ಅಡಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ