ಪೋಲೀಸರು ಹೇಳುವಂತೆ ಕೃಷ್ಣ ಸೇನ್ ಎಂಬ ಹೆಸರಿನಲ್ಲಿ 2013 ರಲ್ಲಿ ಇವಳು ಫೇಸ್‌ಬುಕ್ ಖಾತೆಯನ್ನು ರಚಿಸಿದ್ದು ಪುರುಷನ ರೂಪದಲ್ಲಿ ತನ್ನ ಚಿತ್ರವನ್ನು ಪೋಸ್ಟ್ ಮಾಡಿದ್ದಾಳೆ. ನಂತರ ಹಲವಾರು ಮಹಿಳೆಯರೊಂದಿಗೆ ಚಾಟ್ ಮಾಡಿ ಅವರನ್ನು ಆಕರ್ಷಿಸುತ್ತಿದ್ದಳು. ಅವಳು 2014 ರಲ್ಲಿ ಹೀಗೆ ತನ್ನನ್ನು ಅಲಿಘಡದ ಸಿಎಫ್‌ಎಲ್ ಬಲ್ಬ್ ಉದ್ಯಮಿಯ ಮಗ ಎಂದು ಹೇಳಿಕೊಂಡು ಹುಡುಗಿಯ ಸ್ನೇಹವನ್ನು ಬೆಳೆಸಿಕೊಂಡು ಪುರುಷನ ವೇಷದಲ್ಲಿ ಅವಳನ್ನು ವಿವಾಹವಾಗಿದ್ದಳು. ನಂತರ ಸೇನ್ ವರದಕ್ಷಿಣೆಗಾಗಿ ತನ್ನ ಹೆಂಡತಿಗೆ ಪೀಡಿಸಲು ಪ್ರಾರಂಭಿಸಿದಳು ಮತ್ತು 8.5 ಲಕ್ಷ ರೂಪಾಯಿಗಳನ್ನು ಫ್ಯಾಕ್ಟರಿ ಪ್ರಾರಂಭಿಸುವ ಸಲುವಾಗಿ ತೆಗೆದುಕೊಂಡಳು.
ಸ್ವೀಟಿ ಸೇನ್ ಚಿಕ್ಕಂದಿನಿಂದಲೂ ಹುಡುಗರಂತೆಯೇ ವರ್ತಿಸುತ್ತಿದ್ದು ಹುಡುಗರಂತೆ ಕಾಣಲು ತನ್ನ ಕೂದಲನ್ನು ಕಟ್ ಮಾಡಿಕೊಂಡಿದ್ದೆ, ಬೈಕ್ ಓಡಿಸುತ್ತಿದ್ದೆ ಮತ್ತು ಸಿಗರೇಟ್ ಸೇದುತ್ತಿದ್ದೆ ಎಂದು ಇಂಟರಾಗೇಶನ್ ಸಮಯಲ್ಲಿ ಪೋಲೀಸರಿಗೆ ತಿಳಿಸಿದ್ದಾಳೆ. ವಿವಾಹದ ನಂತರ ತನ್ನ ಹೆಂಡತಿಯರಿಗೆ ತನ್ನ ದೇಹವನ್ನು ನೋಡಲು ಬಿಟ್ಟಿಲ್ಲ ಮತ್ತು ತನ್ನನ್ನು ಸ್ಪರ್ಶಿಸುವುದಕ್ಕೂ ಅವಕಾಶ ನೀಡಿಲ್ಲ ಎಂದು ಪೋಲೀಸರು ಹೇಳಿದ್ದಾರೆ.