ಮನೆಯ ಬಾಗಿಲು ಮತ್ತು ಕಿಟಕಿಗಳನ್ನು ತಯಾರಿಸಲು ಯಾವ ರೀತಿಯ ಮರವನ್ನು ಬಳಸಿದರೆ ಉತ್ತಮ ಎಂಬುದನ್ನು ತಿಳಿದುಕೊಳ್ಳಿ
ಗುರುವಾರ, 10 ಡಿಸೆಂಬರ್ 2020 (06:57 IST)
ಬೆಂಗಳೂರು : ಮನೆಯನ್ನು ವಾಸ್ತು ಪ್ರಕಾರ ನಿರ್ಮಿಸಿದರೆ ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ ನೆಲೆಸಿರುತ್ತದೆ. ಹಾಗಾಗಿ ಮನೆಯ ಬಾಗಿಲು ಮತ್ತು ಕಿಟಕಿಗಳನ್ನು ತಯಾರಿಸಲು ಯಾವ ರೀತಿಯ ಮರವನ್ನು ಬಳಸಬೇಕೆಂದು ತಿಳಿದುಕೊಳ್ಳಿ.
ಕಟ್ಟಡದ ನಿರ್ಮಾಣದ ಸಮಯದಲ್ಲಿ ಬಾಗಿಲು, ಕಿಟಕಿಗಳು, ಕಪಾಟುಗಳು ಮತ್ತು ಪೀಠೋಪಕರಣಗಳನ್ನು ತಯಾರಿಸಲು ಮರವನ್ನು ಬಳಸಲಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಕಿಟಕಿ, ಬಾಗಿಲು ಮತ್ತು ಪೀಠೋಪಕರಣಗಳ ತಯಾರಿಕೆಗೆ ಕೇಫಲ್, ರೋಹಿಣಿ, ಸಾಲ್ ಮತ್ತು ತೇಗದ ಮರಗಳನ್ನು ಶ್ರೇಷ್ಠವೆಂದು ಪರಿಗಣಿಸಲಾಗುತ್ತದೆ. ಅದಲ್ಲದೇ ತಾಲ್, ಅರ್ಜುನ್, ಶೀಶಮ್, ಅಶೋಕ್ ಮತ್ತು ಮಾಹುವಾಗಳ ಮರವನ್ನು ಸಹ ಬಳಸಬಹುದು.
ಸುಟ್ಟ ಮರಗಳನ್ನು, ರಸ್ತೆಯ ಬದಿಯ ಹಾಗೂ ದೇವಾಲಯದ ಮರ, ಚಂಡ ಮಾರುತದಲ್ಲಿ ಬಿದ್ದ ಮರಗಳನ್ನು ಎಂದಿಗೂ ಬಳಸಬಾರದು. ಇದರಿಂದ ಮನೆಯಲ್ಲಿ ಶಾಂತಿ ನೆಲೆಸಿರುವುದಿಲ್ಲ.