ವರಮಹಾಲಕ್ಷ್ಮಿ ಹಬ್ಬದ ದಿನ ಹೇಳಬೇಕಾದ ಲಕ್ಷ್ಮೀ ಮಂತ್ರ

Krishnaveni K

ಗುರುವಾರ, 7 ಆಗಸ್ಟ್ 2025 (08:29 IST)
Photo Credit: X
ನಾಳೆ ವರಮಹಾಲಕ್ಷ್ಮಿ ಹಬ್ಬವಾಗಿದ್ದು ಹಬ್ಬದ ದಿನ ಮಹಿಳೆಯರು ತಪ್ಪದೇ ಈ 11 ಮಂತ್ರಗಳನ್ನು ಪಠಿಸುವುದರಿಂದ ಲಕ್ಷ್ಮೀ ದೇವಿಯ ಕೃಪೆಗೆ ಪಾತ್ರರಾಗುತ್ತೀರಿ. ಆ ಮಂತ್ರಗಳು ಯಾವುವು ಮತ್ತು ಅವುಗಳ ಉಪಯೋಗವೇನು ಇಲ್ಲಿದೆ ನೋಡಿ ವಿವರ.

ಶ್ರಾವಣ ಮಾಸದಲ್ಲಿ ಬರುವ ವರಮಹಾಲಕ್ಷ್ಮಿ ಹಬ್ಬವನ್ನು ವಿಶೇಷವಾಗಿ ಮಹಿಳೆಯರು ಉಪವಾಸ ವ್ರತವಿದ್ದು ಆಚರಿಸುತ್ತಾರೆ. ಲಕ್ಷ್ಮೀದೇವಿಯ ಕಲಶ ಕೂರಿಸಿ ಭಕ್ತಿಯಿಂದ ಮೂರು ಹೊತ್ತು ಪೂಜೆ ಮಾಡಿದರೆ ದೇವಿಯ ಅನುಗ್ರಹಕ್ಕೆ ಪಾತ್ರರಾಗುತ್ತೀರಿ.

ವರಮಹಾಲಕ್ಷ್ಮಿ ಹಬ್ಬದಂದು ಪಠಿಸಬೇಕಾದ ಮಂತ್ರಗಳು.
ಓಂ ಶ್ರೀ ಮಹಾಲಕ್ಷ್ಮಿಯೇ ನಮಃ - ಲಕ್ಷ್ಮಿ ದೇವಿಯ ಅನುಗ್ರಹಕ್ಕಾಗಿರುವ ಮಂತ್ರ
ಓಂ ಲಕ್ಷ್ಮೀ ನಾರಾಯಣೀ ನಮಃ - ಸಂಪತ್ತು ಮತ್ತು ನೆಮ್ಮದಿಗಾಗಿರುವ ಮಂತ್ರ
ಶ್ರೀಂ ವಕ್ರತೃಸ್ತಂಭೇ ನಮಃ – ಜೀವನದಲ್ಲಿ ಯಶಸ್ಸಿಗಾಗಿ
ಓಂ ಮಹಾ ಲಕ್ಷ್ಮೀಯೀ ವಿದ್ಮಹೇ –ಸಂಪತ್ತು ವೃದ್ಧಿಗಾಗಿ
ಓಂ ಲಕ್ಷ್ಮೀ ದೇವ್ಯೈ ನಮಃ.- ಲಕ್ಷ್ಮೀ ದೇವಿಯ ಕೃಪಾಕಟಾಕ್ಷಕ್ಕಾಗಿ
ಓಂ ಶ್ರೀಂ ಕ್ಲೀಂ ಲಕ್ಷ್ಮೀ ವಿದ್ಮಹೇ- ಸುಖ ಸಮೃದ್ಧಿಗಾಗಿರುವ ಮಂತ್ರ
ಓಂ ಲಕ್ಷ್ಮೀ ನಾರಾಯಣ ನಮಃ –ವೈವಾಹಿಕ ಸಂಬಂಧಕ್ಕಾಗಿ
ಶ್ರೀಂ ಶ್ರೀಂ ಶ್ರೀಂ ಮಹಾ ಲಕ್ಷ್ಮೀಯೇ ನಮಃ -ಆರ್ಥಿಕ ವೃದ್ಧಿಗಾಗಿ
 ಓಂ ಲಕ್ಷ್ಮೀ ರಾಮಾಯ ನಮಃ – ಶಾಂತಿ, ನೆಮ್ಮದಿಗಾಗಿರುವ ಮಂತ್ರ
ಓಂ ಮಹಾಲಕ್ಷ್ಮಿಯೇ ನಮಃ ಸರ್ವಮಂಗಳಂ – ಸಮಸ್ತರ ಸುಖ, ನೆಮ್ಮದಿಗಾಗಿ
ಓಂ ಶ್ರೀಮ್‌ ಮಹಾಲಕ್ಷ್ಮಿಯೇ ಸರ್ವ ಸಿದ್ಧಿಯೇ ವಿಧಾಮಹೇ - ಆಧ್ಯಾತ್ಮಿಕ ಭಾವನೆಗಾಗಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ