ಸಿಂಹರಾಶಿಯಲ್ಲಿ ಹುಟ್ಟಿದವರು ಅಭಿವೃದ್ಧಿ ಹೊಂದಲು ಈ ನಿಯಮಗಳನ್ನು ಪಾಲಿಸಿ

ಸೋಮವಾರ, 4 ನವೆಂಬರ್ 2019 (07:26 IST)
ಬೆಂಗಳೂರು : ಎಲ್ಲರಿಗೂ ತಾವು ಅಭಿವೃದ್ಧಿ ಹೊಂದಬೇಕೆಂದು ಆಸೆ ಇರುತ್ತದೆ. ಆದರೆ ಅದು ಸಾಧ್ಯವಾಗುವುದಿಲ್ಲ. ಕೆಲವೊಮ್ಮೆ ನೀವು ಹುಟ್ಟಿದ ರಾಶಿಗನುಗುಣವಾಗಿ ಕೆಲವು ನಿಯಮಗಳನ್ನು ಪಾಲಿಸಿದರೆ ನೀವು ಅಭಿವೃದ್ಧಿ ಹೊಂದಬಹುದು. ಅದರಲ್ಲಿ ಸಿಂಹರಾಶಿಯಲ್ಲಿ ಹುಟ್ಟಿದವರು ಅಭಿವೃದ್ಧಿ ಹೊಂದಲು ಯಾವ ನಿಯಮಗಳನ್ನು ಪಾಲಿಸಬೇಕೆಂಬುದು ಇಲ್ಲಿದೆ ನೋಡಿ.
ಸಿಂಹರಾಶಿಯವರು ದಕ್ಷಿಣ ದಿಕ್ಕಿನಲ್ಲಿರುವ ಮನೆಯಲ್ಲಿ ವಾಸಿಸಬೇಕು. ಇದರಿಂದ ಅವರಿಗೆ ಐಶ್ವರ್ಯ ಪ್ರಾಪ್ತಿಯಾಗುತ್ತದೆ. ಹಾಗೇ ಇವರು ಹಸಿದವರಿಗೆ ಅನ್ನದಾನ ಮಾಡಬೇಕು. ಈ ರಾಶಿಯವರು ಪಾರ್ವತಿ ದೇವಿಯನ್ನು ಪೂಜಿಸಬೇಕು. ಅಲ್ಲದೇ ಹೊರಗೆ ಹೋಗುವಾಗ ನಿಮ್ಮ ಜೇಬಿನಲ್ಲಿ ಪಾರ್ವತಿ ದೇವಿಯ ಫೋಟೋ ಇಟ್ಟುಕೊಂಡಿದ್ದರೆ ನೀವು ಹೋದ ಕೆಲಸ ಯಶಸ್ವಿಯಾಗುತ್ತದೆ.


ಹಾಗೇ ಈ ರಾಶಿಯವರು ಕೆಂಪು ಹೂವಿನ ಗುಲಾಬಿ ಗಿಡ ನೆಟ್ಟು ನೀರು ಹಾಕಿ ಬೆಳೆಸಬೇಕು. ಇದರಿಂದ ನಿಮಗೆ ದರಿದ್ರ ದೂರವಾಗಿ ಆರ್ಥಿಕ ಪ್ರಗತಿಯಾಗುತ್ತದೆ. ಹಾಗೇ ಸಿಂಹರಾಶಿಯವರ ದೋಷಗಳೆಲ್ಲಾ ದೂರವಾಗಲು ರೊಟ್ಟಿಗೆ ಕಪ್ಪು ಎಳ್ಳನ್ನು ಹಾಕಿ ಕಪ್ಪು ನಾಯಿಗೆ ಹಾಕಬೇಕು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ