ಗರ್ಭಾವಸ್ಥೆಯಲ್ಲಿ ಈರುಳ್ಳಿ ಸೇವನೆ ಒಳ್ಳೆಯದೇ?

ಭಾನುವಾರ, 3 ನವೆಂಬರ್ 2019 (11:18 IST)
ಬೆಂಗಳೂರು : ಈರುಳ್ಳಿ ಆರೋಗ್ಯಕ್ಕೆ ತುಂಬಾ ಉತ್ತಮ. ಇದು ರಕ್ತವನ್ನು ಶುದ್ಧಿಕರಿಸಿ ಕಲ್ಮಶಗಳನ್ನು ಹೊರಹಾಕುತ್ತದೆ, ಆದರೆ ಗರ್ಭಾವಸ್ಥೆಯಲ್ಲಿ ಈರುಳ್ಳಿ ಸೇವಿಸುವುದೇ ಉತ್ತಮವೇ ಎಂಬ ಗೊಂದಲ ಹಲವರಲ್ಲಿರುತ್ತದೆ. ಇದಕ್ಕೆ ಉತ್ತರ ಇಲ್ಲಿದೆ.




ಗರ್ಭಾವಸ್ಥೆಯಲ್ಲಿ ಈರುಳ್ಳಿಯನ್ನು ಮಿತವಾಗಿ ತಿನ್ನಬೇಕು . ಗರ್ಭಿಣಿಯರು ದಿನನಿತ್ಯದ ಆಹಾರದಲ್ಲಿ ಈರುಳ್ಳಿಯನ್ನು ತಿಂದರೆ ಯಾವುದೇ ಪರಿಣಾಮ ಉಂಟಾಗುವುದಿಲ್ಲ.


ಆದರೆ ಗರ್ಭಿಣಿಯರು ಕಚ್ಚಾ ಈರುಳ್ಳಿ ತಿಂದಾಗ ಹೊಟ್ಟೆಯೂರಿ, ವಾಂತಿ, ಭೇದಿಯಾದರೆ ಅಂತವರು ಈರುಳ್ಳಿ ಸೇವಿಸುವುದನ್ನು ನಿಲ್ಲಿಸಬೇಕು. ಹಾಗೇ ಚರ್ಮದಲ್ಲಿ ನವೆ, ದದ್ದುಗಳು, ಉಸಿರಾಟದ  ತೊಂದರೆ ಉಂಟಾದರೆ ಅಂತವರು ಈರುಳ್ಳಿ ಸೇವಿಸದಿರುವುದೇ ಉತ್ತಮ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ