ಕಪ್ಪಾದ ಕಂಕುಳ ಭಾಗವನ್ನು ಬೆಳ್ಳಗಾಗಿಸಲು ಈ ಮನೆಮದ್ದನ್ನು ಬಳಸಿ
ಭಾನುವಾರ, 3 ನವೆಂಬರ್ 2019 (11:07 IST)
ಬೆಂಗಳೂರು : ಕೆಮಿಕಲ್ ಯುಕ್ತ ಕ್ರೀಂಗಳನ್ನು ಬಳಸುವುದರಿಂದ ಕಂಕುಳ ಭಾಗ ಕಪ್ಪಾಗುತ್ತದೆ. ಇದರಿಂದ ಸ್ಲೀವ್ಲೆಸ್ ಡ್ರೆಸ್ ಗಳನ್ನು ಧರಿಸಲು ಆಗುವುದಿಲ್ಲ. ಇಂತಹ ಕಪ್ಪಾದ ಕಂಕುಳ ಭಾಗವನ್ನು ಬೆಳ್ಳಗಾಗಿಸಲು ಈ ಮನೆಮದ್ದನ್ನು ಬಳಸಿ.
*ನಿಂಬೆ ಹಣ್ಣಿನಲ್ಲಿ ನೈಸರ್ಗಿಕ ಬ್ಲೀಚ್ ಅಂಶವಿರುವುದರಿಂದ ಹಾಗೂ ಬ್ಯಾಕ್ಟೀರಿಯಾ ನಾಶಕಾರಕ ಅಂಶವಿರುವುದರಿಂದ ನಿಂಬೆಹಣ್ಣಿನ ತುಂಡನ್ನು ಕುಂಕುಳ ಭಾಗಕ್ಕೆ ಉಜ್ಜಿ 10 ನಿಮಿಷ ಬಿಟ್ಟು ನೀರಿನಿಂದ ತೊಳೆದರೆ ಕ್ರಮೇಣ ಕಪ್ಪುದ ಚರ್ಮ ಬಿಳಿಯಾಗುತ್ತದೆ.
*ಆಲೂಗಡ್ಡೆಯಲ್ಲೂ ಬ್ಲೀಚಿಂಗ್ ಅಂಶ ಅಧಿಕವಾಗಿರುವುದರಿಂದ ಆಲೂಗಡ್ಡೆಯ ರಸವನ್ನು ಕಂಕುಳ ಭಾಗಕ್ಕೆ ಉಜ್ಜಿ 20 ನಿಮಿಷ ಬಿಟ್ಟು ನೀರಿನಿಂದ ತೊಳೆಯಿರಿ. ಪ್ರತಿದಿನ ಹೀಗೆ ಮಾಡಿದರೆ ಕಂಕುಳ ಭಾಗ ಬಿಳಿಯಾಗುತ್ತದೆ.