ಮೇಷ ರಾಶಿಯವರು ಇಷ್ಟಾರ್ಥ ಸಿದ್ದಿಯಾಗಲು ಈ ನಿಯಮಗಳನ್ನು ಪಾಲಿಸಿ

ಮಂಗಳವಾರ, 17 ಜುಲೈ 2018 (07:04 IST)
ಬೆಂಗಳೂರು : ಜನ್ಮ ರಾಶಿಗಳಲ್ಲಿ ಮೊದಲ ರಾಶಿ ಮೇಷ ರಾಶಿ. ಈ ರಾಶಿಯಲ್ಲಿ ಜನಿಸಿದವರಿಗೆ ಸುಖ ಸೌಭಾಗ್ಯದ ಪ್ರಾಪ್ತಿಯಾಗಿ ಧನ ಸಂಪತ್ತು ಮತ್ತು ಭೌತಿಕ ಸುಖ ವೃದ್ಧಿಯಾಗ ಬೇಕಾದರೆ ಅವರು ಈ ಸರಳ ಪರಿಹಾರಗಳನ್ನು ಅನುಸರಿಸಬೇಕು ಎಂದು ಪಂಡಿತರೊಬ್ಬರು ತಿಳಿಸಿದ್ದಾರೆ.


 ಅದೇನೆಂದರೆ :
1.ಸಾದು ಸಂತರು ಮತ್ತು ಗುರುಗಳ ಸೇವೆ ಮಾಡಬೇಕು

2.ಪೂಜೆಯ ನಂತರ ಭೂಮಿಗೆ ಒಂದು ಲೋಟಕ್ಕೆ ನೀರು ಮತ್ತು ತೊಗರಿ ಧಾನ್ಯವನ್ನು ನೆಲಕ್ಕೆ ಹಾಕಬೇಕು

3.ಕೆಂಪು ಹವಳ ಹರಳನ್ನು ಅನಾಮಿಕ(4)ಬೆರಳಿಗೆ ಧರಿಸಬೇಕು.

4.ದಿನದ ಅವಧಿ ಮುಗಿದ ನಂತರ ಗೋಧಿ ಬೆಲ್ಲವನ್ನು ಚಿಕ್ಕ ಮಕ್ಕಳಿಗೆ ಸಿಹಿರೀತಿ ಮಾಡಿ ಕೊಡುವುದು

5. ಸುಬ್ರಹ್ಮಣ್ಯ ಸ್ವಾಮಿಯ ಮಂತ್ರ ಅಥವಾ ಅಷ್ಟೋತ್ತರವನ್ನು ಪ್ರತಿದಿನ ಪಠಿಸಬೇಕು ಹಾಗೂ ಪ್ರತೀ ತಿಂಗಳು ಶುಕ್ಷದಲ್ಲಿ ಬರುವ ಷಷ್ಠಿ ತಿಥಿಯ ದಿನ ಶ್ರೀ ಸುಬ್ರಹ್ಮಣ್ಯ ದೇವರಿಗೆ ಹಾಲಿನ ಅಭಿಷೇಕ ಮಾಡಿಸಬೇಕು

6.ಪ್ರತೀ ಮಂಗಳವಾರ ತೊಗರಿಯನ್ನು ನೀರಿನಲ್ಲಿ ನೆನೆಸಿ ಹೋರಿ ಅಥವಾ ಎತ್ತಿಗೆ ನೀಡಬೇಕು

7.ಕೆಂಪು ವರ್ಣದ ಕರವಸ್ತ್ರವನ್ನು ಸದಾ ಉಪಯೋಗಿಸುವುದು

8.ಎಡಗೈಯಲ್ಲಿ ಬೆಳ್ಳಿಯ ಉಂಗುರ ಅಥವಾ (ಬಳೆ) ಧರಿಸುವುದು .

9.ಯಾವುದೇ ಪದಾರ್ಥವನ್ನು ಉಚಿತವಾಗಿ ತೆಗೆದುಕೊಳ್ಳಬಾರದು .

10.ವಿಧವೆಯರಿಗೆ ಸಹಾಯ ಮಾಡಬೇಕು ಮತ್ತು ಆಶೀರ್ವಾದ ಪಡೆಯಬೇಕು .

11.ಸಹೋದರಿ ಪುತ್ರಿ ಮತ್ತು ದೊಡ್ಡಮ್ಮನಿಗೆ ಸಿಹಿ ಪದಾರ್ಥಗಳನ್ನು ಉಡುಗೊರೆಯಾಗಿ ನೀಡಬೇಕು .


 ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ