ದೇವರ ಪೂಜೆ ಮಾಡುವಾಗ ಕರ್ಪೂರ ಆರತಿ ಬೆಳಗುವುದು ಇದೇ ಕಾರಣಕ್ಕಾಗಿ

ಶುಕ್ರವಾರ, 27 ಏಪ್ರಿಲ್ 2018 (06:34 IST)
ಬೆಂಗಳೂರು : ಹಿಂದೂ ಸಂಪ್ರದಾಯದಲ್ಲಿ ದೇವರ ಪೂಜೆ ಮಾಡುವಾಗ ದೀಪ,ಅಗರ ಬತ್ತಿ ಬೆಳಗುವುದರ ಜೊತೆಗೆ ಕರ್ಪೂರ ಆರತಿ ಮಾಡುತ್ತೇವೆ. ಇವೆಲ್ಲದರ ಹಿಂದೆ ವೈಜ್ಙಾನಿಕ ಕಾರಣವೊಂದಿದೆ.


*ಕರ್ಪೂರದಿಂದ ಬರುವ ಹೊಗೆಯಿಂದ ಅಸ್ತಮಾ,ಟೈಪಾಯಿಡ್, ಮನಸ್ಸಿನ ದುಗುಡ, ಬೆಚ್ಚಿ ಬೀಳುವಿಕೆ, ಹಿಸ್ಟೀರಿಯಾ, ಕೀಲುಗಳನೋವು ಮೊದಲಾದ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು.

* ಈ ಹೊಗೆಯಿಂದ ವಾತಾವರಣದಲ್ಲಿರುವ ಬ್ಯಾಕ್ಟೀರಿಯ,ಸಣ್ಣ ಕ್ರಿಮಿಗಳು,ವೈರಸ್ ಗಳು ನಾಶವಾಗುತ್ತವಂತೆ. ಜ್ಞಾಪಕ ಶಕ್ತಿ ವೃದ್ಧಿಸುತ್ತದೆ,ಚರ್ಮದ ಕಾಯಿಲೆಗಳು ಗುಣವಾಗುತ್ತವೆ.

* ಕರ್ಪೂರವನ್ನು ಉರಿಸಿದರೆ ಹೇಗೆ ಸಂಪೂರ್ಣವಾಗಿ ಉರಿದು ಹೋಗುತ್ತದೆಯೋ ಅದೇ ರೀತಿ ಅದರ ಎದುರಿಗೆ ನಿಂತಿರುವವರ ಅಹಂಕಾರವೂ ಉರಿದು ಹೋಗಿ ಪರಿಶುದ್ಧರಾಗುತ್ತಾರಂತೆ.

* ಕರ್ಪೂರವನ್ನು ಉರಿಸುವುದರಿಂದ ವಾತಾವರಣದಲ್ಲಿ ಧನಾತ್ಮಕ ಶಕ್ತಿ ಏರ್ಪಟ್ಟು ಆ ಶಕ್ತಿ ನಮ್ಮಲ್ಲಿಪ್ರವೇಶಿಸಿ ನಮಗೆ ಒಳ್ಳೆಯದನ್ನುಂಟುಮಾಡುತ್ತದಂತೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ