‘ವಿಶ್ವ ಭೂಮಿ ದಿನ’ ವನ್ನು ವಿಶೇಷವಾಗಿ ಆಚರಿಸಿದ ನಟ ಜಗ್ಗೇಶ್
ಗುರುವಾರ, 26 ಏಪ್ರಿಲ್ 2018 (06:43 IST)
ಬೆಂಗಳೂರು : ಯಾವಾಗಲೂ ಸುದ್ದಿಯಾಗುತ್ತಿರುವ ನಟ ನವರಸ ನಾಯಕ ಜಗ್ಗೇಶ್ ಅವರು ಇದೀಗ ‘ವಿಶ್ವ ಭೂಮಿ ದಿನ’ ವನ್ನು ತಮ್ಮದೇ ಆದ ಸ್ಟೈಲ್ ನಲ್ಲಿ ಆಚರಿಸುವುದರ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ.
ನಟ ಜಗ್ಗೇಶ್ ಅವರು ತಮ್ಮ ಪತ್ನಿ ಪರಿಮಳಾ ಹಾಗೂ ಪತ್ನಿ ಸಹೋದರ ದಕ್ಷಿಣ ಭಾರತದ ಫ್ಯಾಶನ್ ಫೊಟೋಗ್ರಾಫರ್ ಸುಂದರ್ ರಾಮು ಸೇರಿ ಶಾಲಾ ಮಕ್ಕಳಿಗೆ 100 ಸಸಿ ಹಂಚುವ ಮೂಲಕ ವಿಶ್ವ ಭೂಮಿ ದಿನವನ್ನು ಅರ್ಥಪೂರ್ಣವಾಗಿ ಆಚರಿಸಿದ್ದಾರೆ.
ಹಾಗೇ ಈ ಬಗ್ಗೆ 'ಭೂಮಿ ತಾಯಿಯ ದಿನವನ್ನು ಗೌರವಿಸಿದರೆ ಜನ್ಮ ಕೊಟ್ಟ ತಾಯಿಯನ್ನು ಗೌರವಿಸಿದಂತೆ. ವಿತರಿಸಲು ಅಣಿಯಾದ ಸಸಿಗಳು ಪ್ರೇರಣೆಯಾಗಲಿ ಪ್ರೀತಿಯ ಆತ್ಮಗಳಿಗೆ ಎಂಬುದೇ ನನ್ನ ಉದ್ದೇಶ' ಎಂದು ಜಗ್ಗೇಶ್ ತಮ್ಮ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ