ಮನೆಯಲ್ಲಿ ಎಷ್ಟು ದ್ವಾರಗಳನ್ನು ನಿರ್ಮಿಸಿದರೆ ಏನು ಫಲ ಸಿಗುತ್ತದೆ ಎಂದು ತಿಳಿಬೇಕಾ...?

ಭಾನುವಾರ, 15 ಏಪ್ರಿಲ್ 2018 (12:01 IST)
ಬೆಂಗಳೂರು : ಮನೆಯನ್ನು ನಿರ್ಮಿಸುವಾಗ ಜನರು ತಮಗೆ ಅನುಕೂಲವಾಗುವಷ್ಟು ದ್ವಾರಗಳನ್ನು ಮನೆಯಲ್ಲಿ ನಿರ್ಮಿಸಿಕೊಳ್ಳುತ್ತಾರೆ. ಆದರೆ ಮನೆಯಲ್ಲಿ ಎಷ್ಟು ದ್ವಾರಗಳನ್ನು ನಿರ್ಮಿಸಿದರೆ ಉತ್ತಮ ಎಂಬುದು ಹಲವರಿಗೆ ತಿಳಿದಿರುವುದಿಲ್ಲ. ಅವರು ತಮಗಿಷ್ಟವಾದಷ್ಟು ಸಂಖ್ಯೆಯಲ್ಲಿ  ದ್ವಾರಗಳನ್ನು ಮನೆಯಲ್ಲಿ ನಿರ್ಮಿಸುವುದರಿಂದ  ಅವರಿಗೆ ಒಳ್ಳೆಯದಾದರೆ ಕೆಲವೊಮ್ಮೆ ಕೆಟ್ಟದಾಗುತ್ತದೆ. ಆದ್ದರಿಂದ ಮನೆಯಲ್ಲಿ ಎಷ್ಟು ದ್ವಾರಗಳನ್ನು ನಿರ್ಮಿಸಿದರೆ ಏನು ಫಲ ಸಿಗುತ್ತದೆ ಎಂದು ಮೊದಲು ತಿಳಿದುಕೊಳ್ಳಿ.


ಒಂದು ಬಾಗಿಲು - ಶುಭಕರ, ಎರಡು - ಒಳ್ಳೆಯದು, ಮೂರು - ಕಲಹ, ಶತ್ರುವೃದ್ಧಿ, ನಾಲ್ಕು - ದೀರ್ಘಾಯಸ್ಸು, ಐದು - ರೋಗ, ಮೃತ್ಯು, ಆರು - ಪುತ್ರಪ್ರದ, ಏಳು -ಮೃತ್ಯುಪ್ರದ, ಎಂಟು - ಚಿರಭಾಗ್ಯ, ಒಂಬತ್ತು - ದೇಹ ಪೀಡೆ, ಹತ್ತು - ನಾಶ, ಚೋರ ಭಯ, ಹನ್ನೊಂದು - ಧನ ನಾಶ, ಹನ್ನೆರಡು - ವ್ಯಾಪಾರಾಭಿವೃದ್ಧಿ, ಹದಿಮೂರು - ಶೀಘ್ರ ಮರಣ, ಹದಿನಾಲ್ಕು ಸಂಪತ್ಭರಿತ, ಹದಿನೈದು - ಫಲನಾಶ, ಹದಿನಾರು - ಧನ ಲಾಭ, ಹದಿನೇಳು - ದಾರಿದ್ರ್ಯ, ಹದಿನೆಂಟು - ಲಕ್ಷ್ಮೀಕಾಂತ, ಹತ್ತೊಂಬತ್ತು - ಪೀಡೆ, ಇಪ್ಪತ್ತು - ಸದಾ ರೋಗ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ