ಪ್ರೆಗ್ನೆಂಟ್ ಸಮಯದಲ್ಲಿ ಹುಳಿ ತಿಂದರೆ ಒಳ್ಳೆಯದೇ?

ಭಾನುವಾರ, 15 ಏಪ್ರಿಲ್ 2018 (11:56 IST)
ಬೆಂಗಳೂರು : ಗರ್ಭಿಣೆಯರು ಹೆಚ್ಚಾಗಿ ಹುಳಿ ತಿನ್ನಲೂ ಇಷ್ಟಪಡುತ್ತಾರೆ. ಅದರಲ್ಲೂ ಹುಣಸೆಹಣ್ಣು ಎಂದರೆ ಬಹಳ ಇಷ್ಟ. ಆದರೆ ಪ್ರೆಗ್ನೆಂಟ್ ಸಮಯದಲ್ಲಿ ಹುಳಿ ತಿಂದರೆ ಒಳ್ಳೆಯದೇ ಎಂಬ ಗೊಂದಲ ಹಲವರಲ್ಲಿದೆ. ಅದಕ್ಕೆ ಉತ್ತರ ಇಲ್ಲಿದೆ ನೋಡಿ.


ಹೌದು ಇದು ಉತ್ತಮ ಎಂದು ಹೇಳುತ್ತದೆ ರಿಸರ್ಚ್‌. ಹುಣಸೆಹುಳಿಯಲ್ಲಿ ನ್ಯೂಟ್ರೀಶನಲ್‌ ವ್ಯಾಲ್ಯೂ ಇದೆ. ಅಂದರೆ ಇದರಲ್ಲಿ ಐರನ್‌, ನಿಯಾಸಿನ್‌, ಡಯಟರಿ ಫೈಬರ್‌ ಮತ್ತು ಹಲವಾರು ಅಂಶಗಳಿವೆ. ಇವು ಗರ್ಭಿಣಿ ಮಹಿಳೆಯರಿಗೆ ಉತ್ತಮವಾಗಿದೆ.

*ಹುಣಸೆ ಹಣ್ಣು ತಿಂದರೆ ರಕ್ತದಲ್ಲಿ ಹಿಮೋಗ್ಲೋಬಿನ್‌ ಪ್ರಮಾಣ ಹೆಚ್ಚಾಗುತ್ತದೆ.

*ಇದು ಮಲಬದ್ಧತೆ ಸಮಸ್ಯೆ ನಿವಾರಣೆ ಮಾಡಲು ಸಹಾಯ ಮಾಡುತ್ತದೆ

*ಇದನ್ನ ಸೇವನೆ ಮಾಡಿದರೆ ಗರ್ಭಿಣಿಯಾಗಿದ್ದಾಗ ಬೆಳಗ್ಗಿನ ಸಮಯದಲ್ಲಿ ಉಂಟಾಗುವ ವಾಕರಿಕೆ, ತಲೆ ಸುತ್ತುವಿಕೆ ಮೊದಲಾದ ಸಮಸ್ಯೆಗಳು ಸಹ ನಿವಾರಣೆಯಾಗುತ್ತದೆ.

*ಇದು ಪ್ರೆಗ್ನೆನ್ಸಿ ಸಮಯದಲ್ಲಿ ಉಂಟಾಗುವ ರಕ್ತದೊತ್ತಡ ಸಮಸ್ಯೆಗಳನ್ನು ನಿವಾರಣೆ ಮಾಡುತ್ತದೆ.

ಆದರೆ ಇದನ್ನು ಸೇವನೆ ಮಾಡುವ ಮುನ್ನ ವೈದ್ಯರನ್ನು ಸಂಪರ್ಕಿಸುವುದು ಉತ್ತಮವಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ