ಮುಟ್ಟಾದ ಮಹಿಳೆಯ ಈ ದೇವಸ್ಥಾನಕ್ಕೆ ಬಂದರೆ ಜೇನು ದಾಳಿ ಮಾಡುತ್ತದಂತೆ!

ಮಂಗಳವಾರ, 29 ಮೇ 2018 (07:19 IST)
ಬೆಂಗಳೂರು : ಈಗಲೂ ನಮ್ಮ ದೇಶದಲ್ಲಿ ಅನೇಕ ಪ್ರದೇಶಗಳಲ್ಲಿ ವಿಚಿತ್ರ ಸಂಪ್ರದಾಯಗಳು, ಆಚರಣೆಗಳು ಇವೆ. ಮುಖ್ಯವಾಗಿ ಪುರಾತನ, ಐತಿಹಾಸಿಕ ಆಲಯಗಳ  ವಿಚಾರಕ್ಕೆ ಬಂದರೆ ಅವುಗಳಲ್ಲಿ ಅನೇಕ ನಂಬಿಕೆಗಳನ್ನು ಪಾಲಿಸಲಾಗುತ್ತಿದೆ. ಪ್ರಕಾಶಂ ಜಿಲ್ಲೆ ರಾಚರ್ಲ ಮಂಡಲದ ಜಿ.ಪುಲ್ಲಲಚೆರುವು ಸಮೀಪದಲ್ಲಿ ನಲ್ಲಮಲ ಅರಣ್ಯ ಪ್ರದೇಶ ಇದೆ. ಅಲ್ಲಿ ನೆಮಲಿಗುಂಡ ರಂಗನಾಯಕ ಸ್ವಾಮಿ ದೇವಾಲಯದಲ್ಲಿ ಮೂಢ ವಿಶ್ವಾಸಗಳನ್ನು ಈಗಲೂ ಪಾಲಿಸಲಾಗುತಿದೆ. ಇಷ್ಟಕ್ಕೂ ಅದೇನೆಂದರೆ.


ನೆಮಲಿಗುಂಡ್ಲ ರಂಗನಾಯಕ ಸ್ವಾಮಿ ಆಲಯಕ್ಕೆ ಮುಟ್ಟಾದ ಮಹಿಳೆಯರು ಬಂದರೆ ಅವರ ಮೇಲೆ ಆಲಯದ ಪ್ರಾಂಗಣದಲ್ಲಿನ ಮರಗಳಿಗೆ ಕಟ್ಟಿರುವ ಜೇನು ದಾಳಿ ಮಾಡುತ್ತದಂತೆ. ಹಾಗಾಗಿ ಪೀರಿಯಡ್ಸ್ ಸಮಯದಲ್ಲಿ ಮಹಿಳೆಯರು ಯಾರೂ ಈ ಆಲಯಕ್ಕೆ ಬರಲ್ಲ. ಬಂದರೆ ಅವರ ಜತೆಗೆ ಬಂದ ಪುರುಷರ ಮೇಲೂ ಆ ಜೇನು ದಾಳಿ ಮಾಡುತ್ತದಂತೆ. ಕೆಲವರಿಗೆ ಈ ಅನುಭವ ಸಹ ಆಗಿದೆಯಂತೆ. ಹಾಗಾಗಿ ಆ ಆಲಯದಲ್ಲಿ ಅದೆಷ್ಟೋ ಕಾಲದಿಂದ ಈ ಆಚಾರಗಳನ್ನು ಪಾಲಿಸಲಾಗುತ್ತಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ