ಶ್ರಾವಣ ಮಾಸದಲ್ಲಿ ಈ ಎಲೆಯನ್ನು ಜೇಬಿನಲ್ಲಿಟ್ಟುಕೊಂಡರೆ ಕೋಟ್ಯಾಧಿಪತಿ ಯೋಗ ಪ್ರಾಪ್ತಿ
ಭಾನುವಾರ, 2 ಆಗಸ್ಟ್ 2020 (07:32 IST)
ಬೆಂಗಳೂರು : ನಮ್ಮ ಸಂಸ್ಕೃತಿಯಲ್ಲಿ ಶ್ರಾವಣ ಮಾಸಕ್ಕೆ ಹೆಚ್ಚು ಪ್ರಾಮುಳ್ಯತೆ ನೀಡಲಾಗುತ್ತದೆ. ಕಾರಣ ಶ್ರಾವಣ ಮಾಸದಲ್ಲಿ ಹಬ್ಬ ಹರಿದಿನಗಳನ್ನು ಮಾಡಲಾಗುತ್ತದೆ. ಆದಕಾರಣ ಈ ಮಾಸದಲ್ಲಿ ಈ ಎಲೆಯನ್ನು ನಿಮ್ಮ ಸೀರೆ ಸೆರಗಿನಲ್ಲಿ ಕಟ್ಟಿಕೊಂಡರೆ ಕೋಟ್ಯಾಧಿಪತಿ ಯೋಗ ಪ್ರಾಪ್ತಿಯಾಗುತ್ತದೆ.
ಶ್ರಾವಣ ಮಾಸ ವಿಷ್ಣು ಮತ್ತು ಲಕ್ಷ್ಮೀಗೆ ಬಹಳ ಪ್ರಿಯವಾದ ಮಾಸ. ಹಾಗೇ ವಿಷ್ಣುವಿಗೆ ಅರಳಿ ಮರವೆಂದರೆ ಪ್ರಿಯ. ಆದಕಾರಣ ಶನಿವಾರದಂದು ಈ ಮರದ ಎಲೆಯನ್ನು ತಂದು ಹಾಲಿನಲ್ಲಿ ತೊಳೆದು ದೇವರ ಮನೆಯಲ್ಲಿಟ್ಟು ಅರಶಿನ ಕುಂಕುಮ ಹಚ್ಚಿ, ಅಕ್ಷತೆ, ಪೂಜೆ ಮಾಡಿ ಮಹಿಳೆಯರು ಸೀರೆ ಸೆರಗಿನಲ್ಲಿ ಕಟ್ಟಿಕೊಂಡರೆ ಹಾಗೂ ಪುರುಷರು ತಮ್ಮ ಜೇಬಿನಲ್ಲಿಟ್ಟುಕೊಂಡರೆ ಲಕ್ಷ್ಮೀ ನಾರಾಯಣನ ಅನುಗ್ರಹವಾಗಿ ಕೋಟ್ಯಾಧಿಪತಿ ಯೋಗ ಪ್ರಾಪ್ತಿಯಾಗುತ್ತದೆ.