ಕೆಪಿಸಿಸಿ ನೂತನ ಸಮಿತಿ ರಚನೆ ವಿಚಾರದಲ್ಲಿ ಕೈ ನಾಯಕರಿಗೆ ಎದುರಾಗಿದೆ ಮತ್ತೊಂದು ತಲೆನೋವು

ಮಂಗಳವಾರ, 25 ಜೂನ್ 2019 (10:05 IST)
ಬೆಂಗಳೂರು : ಸಚಿವ ಸ್ಥಾನ ಹಂಚಿಕೆ ಬಳಿಕ ಕೆಪಿಸಿಸಿ ನೂತನ ಸಮಿತಿ ರಚನೆಗೆ ಕೈ ಪಾಳಯದಲ್ಲಿ ಮತ್ತೊಂದು ತಲೆನೋವು ಎದುರಾಗಿದೆ.




ಕೆಪಿಸಿಸಿ ನೂತನ ಸಮಿತಿ ರಚನೆಗೆ ಕೈ ನಾಯಕರು ಸಿದ್ಧತೆ ನಡೆಸಿದ್ದು, ಆದರೆ ಕೆಪಿಸಿಸಿ ನೂತನ ಸಮಿತಿಗೆ ಸೇರ್ಪಡೆಗೊಳ್ಳಲು ಸಮಿತಿ ಆಕಾಂಕ್ಷಿಗಳ ನಡುವೆ ಲಾಬಿ ಶುರುವಾಗಿದೆ. ಕೆಪಿಸಿಸಿಯ ಮುನ್ನೂರು ಸ್ಥಾನಗಳಿಗೆ ಮೂರು ಪಟ್ಟು ಆಕಾಂಕ್ಷಿಗಳು ಲಾಬಿ ನಡೆಸುತ್ತಿದ್ದಾರೆ.


ಕೆಪಿಸಿಸಿ ಉಪಾಧ್ಯಕ್ಷ, ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿ ಹುದ್ದೆ. ಸುಮಾರು 300 ಸ್ಥಾನಗಳ ಮೇಲೆ 1000ಕ್ಕೂ ಹೆಚ್ಚು ಮಂದಿಯ ಕಣ್ಣು ಹಾಕಿದ್ದು, ನಾಯಕರ ಮೇಲೆ ಪ್ರಭಾವ ಬೀರಲು ಕೆಪಿಸಿಸಿ ಅಂಗಳದಲ್ಲಿ ಲಾಬಿ ಶುರುವಾಗಿದೆ. ಆದ್ದರಿಂದ ಕೆಪಿಸಿಸಿ ನೂತನ ಸಮಿತಿ ರಚನೆಗೆ ಕನಿಷ್ಠ ಇನ್ನು ಒಂದು ತಿಂಗಳಾದರು ಬೇಕು ಎನ್ನಲಾಗಿದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ