ಈ ದಿನ ನಿಮ್ಮ ಕಣ್ಣಿಗೆ ಹೆಗ್ಗಣ ಕಾಣಿಸಿಕೊಂಡರೆ ಆರ್ಥಿಕ ಸ್ಥಿತಿ ವೃದ್ಧಿಯಾಗುತ್ತದೆಯಂತೆ
ಸೋಮವಾರ, 24 ಡಿಸೆಂಬರ್ 2018 (07:31 IST)
ಬೆಂಗಳೂರು : ಮನೆಯಲ್ಲಿ ಸುಖ ಸಂಪತ್ತು ವೃದ್ಧಿಯಾಗಲೆಂದು ಎಲ್ಲರೂ ದೀಪಾವಳಿಯಂದು ಲಕ್ಷ್ಮೀ ಪೂಜೆ ಮಾಡುತ್ತಾರೆ. ನರಕ ಚತುರ್ಥಿ ಮರುದಿನ ಅಮವಾಸ್ಯೆಯಂದು ಈ ಪೂಜೆ ಮಾಡಲಾಗುತ್ತದೆ. ಆದರೆ ಅಂದು ಲಕ್ಷ್ಮೀ ನೀವು ಮಾಡಿದ ಪೂಜೆಗೆ ಒಲಿದು ಮನೆಗೆ ಪ್ರವೇಶಿಸಿದ್ದಾಳಾ ಎನ್ನುವ ಬಗ್ಗೆ ಕೆಲವು ಸೂಚನೆಗಳು ಸಿಗುತ್ತದೆ.
ಲಕ್ಷ್ಮಿ ಪೂಜೆ ದಿನ ಲಕ್ಷ್ಮಿ ದೇವಿಯ ವಾಹನ ಗೂಬೆ ಕಾಣಿಸಿಕೊಂಡರೆ ನಿಮ್ಮ ಅದೃಷ್ಟ ಬದಲಾಗ್ತಿದೆ ಎಂದರ್ಥ. ದೀಪಾವಳಿ ದಿನ ಬೆಕ್ಕು ಮನೆಗೆ ಬಂದು ಹಾಲು ಕುಡಿದರೆ ಇದು ಶುಭ ಸಂಕೇತ. ತಾಯಿ ಕೃಪೆ ವರ್ಷಪೂರ್ತಿ ನಿಮ್ಮ ಮೇಲಿರುತ್ತದೆ ಎಂದರ್ಥ.
ಲಕ್ಷ್ಮಿ ಪೂಜೆಯ ರಾತ್ರಿ ಹೆಗ್ಗಣ ಕಾಣಿಸಿಕೊಂಡರೆ ಆರ್ಥಿಕ ವೃದ್ಧಿಯಾಗಲಿದೆ ಎಂದರ್ಥ. ದೀಪಾವಳಿ ದಿನ ಹಲ್ಲಿ ಗೋಡೆ ಮೇಲೆ ಕಾಣಿಸಿಕೊಂಡರೆ ತಾಯಿ ಲಕ್ಷ್ಮಿ ನಿಮ್ಮ ಮೇಲೆ ಕೃಪೆ ತೋರಿದ್ದಾಳೆ ಎಂದರ್ಥ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.