ದೇವರ ಕೋಣೆಯಲ್ಲಿ ಈ ಆರು ಮೂರ್ತಿಗಳನ್ನು ಇಟ್ಟರೆ ಜೀವನ ನರಕವಾಗುತ್ತಂತೆ
ಮಂಗಳವಾರ, 19 ಡಿಸೆಂಬರ್ 2017 (07:51 IST)
ಬೆಂಗಳೂರು: ದೇವರ ಕೋಣೆಯಂದರೆ ಅದು ಪವಿತ್ರವಾದ ಜಾಗ . ಅಲ್ಲಿ ಕುಳಿತುಕೊಳ್ಳುವುದರಿಂದ ಮನಸ್ಸಿಗೆ ಶಾಂತಿ ಸಿಗುತ್ತದೆ. ವಾಸ್ತು ಪ್ರಕಾರ ಮನೆಯ ಈಶಾನ್ಯ ದಿಕ್ಕಿನಲ್ಲಿ ದೇವರ ಕೋಣೆ ಇರಬಾರದು. ದೇವರ ಕೋಣೆಯಲ್ಲಿರುವ ಮೂರ್ತಿಗಳ ಮೇಲೆ ಜೀವನದ ಸುಖ ದುಖಃ ಇದೆ. ದೇವರ ಕೋಣೆಯಲ್ಲಿ ಈ ಆರು ರೀತಿಯ ಮೂರ್ತಿಗಳನ್ನು ಇಡಬಾರದು.
ಮೊದಲನೇಯದಾಗಿ ಮಹಾ ಲಕ್ಷ್ಮೀದೇವಿ ನಿಂತಿರುವ ಪೋಟೋ ಅಥವಾ ಮೂರ್ತಿ ಇಡಬಾರದು. ಇದರಿಂದ ಧನ ಸಂಪತ್ತು ಮನೆಯಲ್ಲಿ ಇರಲ್ಲ. ಅದರ ಬದಲು ಕುಳಿತಿರುವ ಪೋಟೋ ಇಡಬೇಕು. ಎರಡನೇಯದಾಗಿ ಮಹಾ ದುರ್ಗೇ ಯ ರೌದ್ರಾವತಾರದ ಮೂರ್ತಿಯನ್ನು ದೇವರ ಕೋಣೆಯಲ್ಲಿ ಇಡಬಾರದು. ಮೂರನೇಯದಾಗಿ ನಟರಾಜನ ಮೂರ್ತಿ. ನಟರಾಜ ಎನ್ನುವುದು ಶಿವನ ತಾಂಡವ ಸ್ವರೂಪ. ಶಿವನು ಕೋಪಗೊಂಡಾಗ ಮಾತ್ರ ತಾಂಡವ ನೃತ್ಯ ಮಾಡುತ್ತಾನೆ. ಆದ ಕಾರಣ ಈ ಮೂರ್ತಿ ಮನೆಯಲ್ಲಿದ್ದರೆ ಮನೆಯವರಿಗೆ ಸಿಟ್ಟು, ಕೋಪ ಹೆಚ್ಚಾಗುತ್ತದೆ.
ನಾಲ್ಕನೇಯದಾಗಿ ಭೈರವನ ಮೂರ್ತಿ. ಇದು ಕೂಡ ಶಿವನ ಅವತಾರ. ಭೈರವನ ಪೂಜೆಮಾಡಲು ತಂತ್ರ-ಮಂತ್ರದ ಅಗತ್ಯ ಇರುವುದರಿಂದ ಈ ಮೂರ್ತಿಯನ್ನು ಮನೆಯಲ್ಲಿ ಇಡಬಾರದು. ಐದನೇಯದಾಗಿ ಶನೇಶ್ವರನ ಪೋಟೋವನ್ನು ಮನೆಯಲ್ಲಿ ಇಡಬಾರದು. ಬದಲಾಗಿ ಶನೇಶ್ವರನನ್ನು ದೇವಸ್ಥಾನದಲ್ಲೇ ಪೂಜಿಸಬೇಕು. ಏಕೆಂದರೆ ಶನೇಶ್ವರನ ಪೂಜೆಗೆ ನಿಯಮವಿದೆ. ಅದನ್ನು ಮನೆಯಲ್ಲಿ ಮಾಡಲಾಗುವುದಿಲ್ಲ.ಆರನೇಯದಾಗಿ ಒಂದೇ ದೇವರ ಎರಡು ಮೂರ್ತಿಗಳನ್ನು ಮನೆಯಲ್ಲಿ ಇಡಬಾರದು. ಇದರಿಂದ ಮನೆಯವರಲ್ಲಿ ಸಂಬಂಧದಲ್ಲಿ ಬಿರುಕು, ವೈಮನಸ್ಸು ಉಂಟಾಗುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ