ಈ ವಸ್ತುಗಳನ್ನು ದಾನಮಾಡಬೇಡಿ ಪಾಪ ಬರುತ್ತೆ

ಭಾನುವಾರ, 10 ಡಿಸೆಂಬರ್ 2017 (06:38 IST)
ಬೆಂಗಳೂರು: ನಮ್ಮಲ್ಲಿ ದಾನಕ್ಕೆ ಬಹಳ ಮಹತ್ವವಿದೆ. ಜೀವನದಲ್ಲಿ ದಾನಕ್ಕಿಂತ ಶ್ರೇಷ್ಠ ಕಾರ್ಯ ಮತ್ತೊಂದಿಲ್ಲಿ ಎಂದು ಹೇಳುತ್ತಾರೆ. ದಾನ ಎನ್ನುವುದು ಸದುದ್ದೇಶದಿಂದ ಕೂಡಿದ್ದು, ಯಾವ ಅಪೇಕ್ಷೆ ಇಲ್ಲದೆ ದಾನ ಮಾಡಬೇಕು. ಅದು ಪುರಾತನ ಕಾಲದಿಂದಲೂ ಮಾಡುತ್ತಾ ಬಂದ ಕಾರ್ಯ. ದಾನ ನೀಡುವುದರಿಂದ ದೇವಾನುದೇವತೆಗಳಿಂದ ನಮಗೆ ಕೃಪೆ,ಕರುಣೆ,ಅನುಗ್ರಹ ದೊರೆಯುತ್ತದೆ ಎಂಬ ನಂಬಿಕೆ ಇದೆ.


ಆದರೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಕೆಲವೊಂದು ವಸ್ತುಗಳನ್ನು ದಾನ ಮಾಡಬಾರದು ಎಂದುಹೇಳುತ್ತಾರೆ. ಅವುಗಳನ್ನು  ದಾನಮಾಡುವುದರಿಂದ  ಪುಣ್ಯಕ್ಕಿಂತ ಪಾಪವೆ ಹೆಚ್ಚು. ಪ್ಲಾಸ್ಟಿಕ್ ವಸ್ತುಗಳನ್ನು ದಾನ ಮಾಡಬಾರದು. ಇದರಿಂದ ಕುಟುಂಬದ ಮೇಲೆ, ವ್ಯವಹಾರದ ಮೇಲೆ ಪರಿಣಾಮ ಬೀರುತ್ತದೆ. ಹಾಗೆ ಪೊರಕೆಯನ್ನು ದಾನ ಮಾಡಬಾರದು. ಇದರಿಂದ ಕೈಯಲ್ಲಿ ಹಣ ನಿಲ್ಲುವುದಿಲ್ಲ.


ಹಾಗೆ ಕಬ್ಬಿಣದ ವಸ್ತುಗಳನ್ನು ,ಹಾಳಾದ ಪುಸ್ತಕಗಳನ್ನು, ಆಯುಧಗಳನ್ನು ದಾನವಾಗಿ ಕೊಡಬಾರದು.ತಾಜಾ ಆಹಾರಗಳನ್ನು ಮಾತ್ರ ದಾನವಾಗಿ ಕೊಡಬೇಕು. ಯಾವ ವಸ್ತುಗಳನ್ನು ದಾನ ಮಾಡಬಾರದು, ಯಾವ ವಸ್ತುಗಳನ್ನು ದಾನ ಮಾಡಬೇಕು ಎಂದು ತಿಳಿದು ದಾನ ನೀಡಿದರೆ ನಮಗೆ ಸತ್ಫಲಗಳು ದೊರೆಯುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ