ಮಕ್ಕಳಾಗದೆ ಕೊರಗುತ್ತಿರುವವರು ಒಮ್ಮೆ ಈ ದೇವಸ್ಥಾನಕ್ಕೆ ಭೇಟಿ ನೀಡಿ. ಯಾಕೆ ಗೊತ್ತಾ?
ಬುಧವಾರ, 5 ಸೆಪ್ಟಂಬರ್ 2018 (10:17 IST)
ಬೆಂಗಳೂರು : ಹೆಣ್ಣಿನ ಜನ್ಮ ಸಾರ್ಥಕತೆ ಪಡೆದುಕೊಳ್ಳುವುದು ಆಕೆ ತಾಯಿಯಾದಾಗ ಎಂದು ಹಿರಿಯರು ಹೇಳುತ್ತಾರೆ. ಆದರೆ ಅದೆಷ್ಟೋ ಮಂದಿ ತಾಯಿತನದ ಸುಖ ಕಾಣದೆ ದುಃಖಿಸುತ್ತಿದ್ದಾರೆ. ಅಂತವರು ಒಮ್ಮೆ ಈ ದೇವಸ್ಥಾನಕ್ಕೆ ಭೇಟಿ ನೀಡಿ.
ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯ ಲಡಬಡೋ ತಾಲೂಕಿನ ಸಿಮಸ್ ಊರಿನಲ್ಲಿರುವ ಸಿಮಸಾ ದೇವಿಯ ಮಂದಿರದಲ್ಲಿ ಮಕ್ಕಳಾಗದ ಮಹಿಳೆಯರು ನವರಾತ್ರಿಯ ಸಂದರ್ಭದಲ್ಲಿ ಮಲಗಿದರೆ ಅವರಿಗೆ ಸಂತಾನ ಪ್ರಾಪ್ತವಾಗುತ್ತದೆ ಎಂಬ ದಟ್ಟ ನಂಬಿಕೆಗೆ ಹೆಸರುವಾಸಿಯಾಗಿದೆ. ಆದ್ದರಿಂದ ಈ ದೇವಸ್ಥಾನಕ್ಕೆ ‘ಸಂತಾನ ದಾದ್ರಿ’ ಎಂದೂ ಕರೆಯುತ್ತಾರೆ.
ಈ ದೇವಸ್ಥಾನದಲ್ಲಿ ನವರಾತ್ರಿಯ ಸಂದರ್ಭದಲ್ಲಿ ನೂರಾರು ಮಕ್ಕಳಿಲ್ಲದ ಮಹಿಳೆಯರು ಮಲಗಲು ಬರುತ್ತಾರಂತೆ. ಅಷ್ಟೇ ಅಲ್ಲ ಇಲ್ಲಿ ಮಲಗಿದಾಗ ಮಹಿಳೆಗೆ ಮುಂದೆ ಜನಿಸುವ ಮಗುವಿನ ಲಿಂಗ ಕೂಡ ಕನಸಿನಲ್ಲಿ ತಿಳಿದುಬರುತ್ತದೆಯಂತೆ. ಹೇಗೆಂದರೆ ಮಹಿಳೆಯ ಕನಸಿನಲ್ಲಿ ಪೇರಲ( ಸೀಬೆ ) ಹಣ್ಣು ಕಂಡುಬಂದರೆ ಹುಡುಗ ಹಾಗೂ ಬೆಂಡೆಕಾಯಿ ಕಂಡುಬಂದರೆ ಹುಡುಗಿ ಆಗುತ್ತದೆಂಬ ನಂಬಿಕೆಗಳು ಹಿಂದಿನಿಂದಲೂ ನಿಜವಾಗಿದೆಯಂತೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.