ಗರ್ಭಕೋಶದ ಆರೋಗ್ಯ ಕಾಪಾಡುತ್ತದೆಯಂತೆ ಹೆಣ್ಣು ಮಕ್ಕಳು ಧರಿಸುವ ಈ ವಸ್ತು
ಸೋಮವಾರ, 3 ಸೆಪ್ಟಂಬರ್ 2018 (12:30 IST)
ಬೆಂಗಳೂರು : ನಮ್ಮ ಹಿರಿಯರು ಆಚರಿಸುವ ಆಚರಣೆಗಳಲ್ಲಿ ಒಂದು ವೈಜ್ಞಾನಿಕ ಕಾರಣಗಳಿರುತ್ತದೆ. ಅದರಲ್ಲಿ ಮದುವೆ ಆದ ಹೆಣ್ಣು ಮಕ್ಕಳ ಕಾಲಿಗೆ ಕಾಲುಂಗರು ತೊಡಿಸುವ ಆಚರಣೆ ಕೂಡ ಒಂದು. ಬೆಳ್ಳಿ ಕಾಲುಂಗುರ ಹೆಣ್ಣೀನ ಸೌಂದರ್ಯವನ್ನು ಹೆಚ್ಚಿಸುವುದು ಮಾತ್ರವಲ್ಲ. ಇದು ಆರೋಗ್ಯಕ್ಕೂ ಒಳ್ಳೆಯದಂತೆ. ಅಲ್ಲದೆ ಬೆಳ್ಳಿ ದೇಹದ ಉಷ್ಣತೆಯನ್ನು ಕಡಿಮೆ ಮಾಡುವುದು.
ಮದುವೆಯ ಬಳಿಕ ಹೆಣ್ಣಿನ ಕಾಲಿನ ಹೆಬ್ಬರಳಿನ ಪಕ್ಕದ ಬೆರಳಿಗೆ ತೊಡಿಸುವ ಕಾಲುಂಗುರ ಹೆಣ್ಣು ಮಕ್ಕಳ ಗರ್ಭಕೋಶದ ಆರೋಗ್ಯವನ್ನು ಕಾಪಾಡುತ್ತದೆಯಂತೆ. ಕಾಲುಂಗುರ ತೊಡುವ ಬೆರಳಿನಲ್ಲಿರುವ ನರಕ್ಕೂ ಗರ್ಭಕೋಶಕ್ಕೂ ಸಂಬಂಧವಿದೆಯಂತೆ. ಇದನ್ನು ಧರಿಸುವುದರಿಂದ ಮುಟ್ಟಿನ ಸಮಸ್ಯೆ ಕಾಡುವುದಿಲ್ಲವಂತೆ.
ಕಾಲು ಬೆರಳಿನಲ್ಲಿರುವ ಬೆಳ್ಳಿಯ ಉಂಗುರ ಭೂಮಿಯಲ್ಲಿರುವ ಪೋಲಾರ್ ಶಕ್ತಿಯನ್ನು ಹೀರಿ ಕಾಲಿನ ನರಗಳ ಮೂಲಕ ಗರ್ಭಕೋಶಕ್ಕೆ ಶಕ್ತಿ ನೀಡುತ್ತದೆ. ಕಾಲುಂಗುರ ಧರಿಸಿದಾಗ ಆ ಬೆರಳಿನ ಮೇಲೆ ಒತ್ತಡ ಬೀಳುವುದರಿಂದ ಗರ್ಭಕೋಶದಲ್ಲಿ ರಕ್ತ ಸಂಚಾರ ಸರಾಗವಾಗಿ ನಡೆಯಲು ಸಹಾಯ ಮಾಡುತ್ತದೆಯಂತೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ