ಶ್ರಾವಣ ಮಾಸದಲ್ಲಿ ಈ ವಸ್ತುಗಳನ್ನು ಮನೆಗೆ ತಂದರೆ ಶುಭ ಫಲ ದೊರಕುತ್ತದೆಯಂತೆ
ಬುಧವಾರ, 22 ಆಗಸ್ಟ್ 2018 (07:15 IST)
ಬೆಂಗಳೂರು : ಶ್ರಾವಣ ಮಾಸದಲ್ಲಿ ಶಿವನ ಆರಾಧನೆ ಮಾಡಿದರೆ ವಿಶೇಷ ಫಲ ದೊರೆಯುತ್ತದೆ. ಆದ್ದರಿಂದ ಶಿವ ದೇವಾಲಯಗಳಲ್ಲಿ ಭಕ್ತರ ದಂಡೇ ನೆರೆದಿರುತ್ತದೆ. ಅದರಲ್ಲೂ ವಿಶೇಷವಾಗಿ ಸೋಮವಾರದಂದು ದೇವಸ್ಥಾನದಲ್ಲಿ ಶಿವನ ಪೂಜೆ, ಅಭಿಷೇಕ ಜೋರಾಗಿರುತ್ತದೆ.
ಶ್ರಾವಣ ಮಾಸದಲ್ಲಿ ಶಿವ ಪೂಜೆಯ ಜೊತೆಗೆ ಶಿವನಿಗೆ ಸಂಬಂಧಪಟ್ಟ ಕೆಲವು ವಸ್ತುಗಳನ್ನು ಮನೆಯಲ್ಲಿ ತಂದಿಟ್ಟುಕೊಳ್ಳುವುದರಿಂದ ಮನೆಯಲ್ಲಿ ಸುಖ ಶಾಂತಿ ನೆಲೆಸಿರುತ್ತದೆ. ಶ್ರಾವಣ ಮಾಸದಲ್ಲಿ ಬೆಳ್ಳಿ ತ್ರಿಶೂಲವನ್ನು ತಂದಿಡುವುದರಿಂದ ಅವಮಾನದಿಂದ ಮುಕ್ತಿ ಸಿಗುತ್ತದೆ.
ಹಾವು ಶಿವನ ಆಭರಣ. ಆದ್ದರಿಂದ ಶ್ರಾವಣ ಮಾಸದ ಸೋಮವಾರದಂದು ಹಾವಿನ ಬೆಳ್ಳಿ ಮೂರ್ತಿಯನ್ನು ಮನೆಗೆ ತೆಗೆದುಕೊಂಡು ಬಂದು ಪ್ರತಿದಿನ ಪೂಜೆ ಮಾಡಿ. ನಂತರ ಶ್ರಾವಣ ಮಾಸದ ಕೊನೆಯ ದಿನ ಅದನ್ನು ಪವಿತ್ರವಾದ ನದಿಯಲ್ಲಿ ತೊಳೆದು ದೇವಸ್ಥಾನಕ್ಕೆ ನೀಡಿ. ಹೀಗೆ ಮಾಡಿದ್ರೆ ಜಾತಕದಲ್ಲಿರುವ ಪಿತೃದೋಷ ಹಾಗೂ ಸರ್ಪದೋಷ ನಿವಾರಣೆಯಾಗುತ್ತದೆ.
ಶ್ರಾವಣ ಮಾಸದಲ್ಲಿ ಕೊರಳಿಗೆ ರುದ್ರಾಕ್ಷಿ ಮಾಲೆಯನ್ನು ಧರಿಸಿದರೆ ಸಮೃದ್ಧಿ, ನೆಮ್ಮದಿ ಪ್ರಾಪ್ತಿಯಾಗುತ್ತದೆ. ಹಾಗೇ ಡಮರುಗ ಶಿವನ ಪವಿತ್ರ ವಾದ್ಯ. ಶ್ರಾವಣ ಮಾಸದಲ್ಲಿ ಡಮರುಗ ಮನೆಗೆ ತಂದು ಬಾರಿಸಿದರೆ ಮನೆಯಲ್ಲಿರುವ ನಕರಾತ್ಮಕ ಶಕ್ತಿಗಳು ನಾಶವಾಗುತ್ತವೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ