ಗ್ರಾಹಕರಿಗಾಗಿ 47 ರುಪಾಯಿಗಳ ಪಾಕೆಟ್ ಫ್ರೆಂಡ್ಲಿ ಪ್ರೀಪೇಯ್ಡ್ ಪ್ಲಾನ್ ಬಿಡುಗಡೆ ಮಾಡಿದ ಏರ್ಟೆಲ್

ಮಂಗಳವಾರ, 21 ಆಗಸ್ಟ್ 2018 (15:18 IST)
ಬೆಂಗಳೂರು : ಜಿಯೋದ 52 ರೂಪಾಯಿ ಹಾಗೂ ವೋಡಾಫೋನ್ 47 ರೂಪಾಯಿ ಪ್ಲಾನ್ ಗೆ ಪೈಪೋಟಿ ನೀಡಲು ಏರ್ಟೆಲ್ ಗ್ರಾಹಕರಿಗಾಗಿ 47 ರುಪಾಯಿಗಳ ಪಾಕೆಟ್ ಫ್ರೆಂಡ್ಲಿ ಪ್ರೀಪೇಯ್ಡ್ ಪ್ಲಾನ್ ನ್ನು ಬಿಡುಗಡೆ ಮಾಡಿದೆ.


ಏರ್ ಟೆಲ್ ನ 47ರುಪಾಯಿ ಯೋಜನೆಯು 28 ದಿನಗಳ ಕಾಲ ವ್ಯಾಲಿಡಿಟಿ ಹೊಂದಿದ್ದು, ಈ ಪ್ಲಾನ್ ನಲ್ಲಿ ವಾಯ್ಸ್ ಕಾಲಿಂಗ್, ಎಸ್‌ಎಂಎಸ್, ಡೇಟಾ ಮೂರರ ಲಾಭ ಪಡೆಯಬಹುದಾಗಿದೆ. ಈ ಯೋಜನೆಯಲ್ಲಿ ಗ್ರಾಹಕರಿಗೆ 7500 ಸೆಕೆಂಡ್ಸ್ ಲೋಕಲ್, ಎಸ್ಟಿಡಿ ಮತ್ತು ರೋಮಿಂಗ್ ಕರೆ ಸೌಲಭ್ಯ ಸಿಗ್ತಿದೆ. ಅಂದ್ರೆ 125 ನಿಮಿಷಗಳ ಕಾಲ ಉಚಿತವಾಗಿ ಮಾತನಾಡಬಹುದಾಗಿದೆ. ಇದ್ರ ಜೊತೆ 50 ಎಸ್ ಎಂ ಎಸ್ ಹಾಗೂ 500 ಎಂಬಿ 2ಜಿ/3ಜಿ /4ಜಿ ಡೇಟಾ ಗ್ರಾಹಕರಿಗೆ ಸಿಗಲಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ