ಹುಟ್ಟಿದ ರಾಶಿಗನುಗುಣವಾಗಿ ಹುಡುಗಿಯರು ಎಂತಹ ಪುರುಷನನ್ನ ಇಷ್ಟಪಡುತ್ತಾರೆ ಎನ್ನುವುದನ್ನ ತಿಳಿಯಿರಿ

ಸೋಮವಾರ, 9 ಸೆಪ್ಟಂಬರ್ 2019 (08:51 IST)
ಬೆಂಗಳೂರು : ಹೆಣ್ಣಿನ ಮನಸ್ಸು ಅರಿಯುವುದು ತುಂಬಾ ಕಷ್ಟ ಎನ್ನುತ್ತಾರೆ. ಆದರೆ ಅವರಿಗೆ ಎಂತಹ ಹುಡುಗ ಇಷ್ಟವಾಗುತ್ತಾರೆ ಅನ್ನೋದನ್ನ ಅವರು ಹುಟ್ಟಿದ ರಾಶಿಯ ಆಧಾರದ ಮೇಲೆ ತಿಳಿಯಬಹುದು.
*ಮೇಷ :ಈ ರಾಶಿಯಲ್ಲಿ ಹುಟ್ಟಿದ ಮಹಿಳೆಯರು ಆರೈಕೆ ಮಾಡುವ ಪುರುಷರೇ ಹೆಚ್ಚು ಇಷ್ಟವಾಗುತ್ತಾರೆ. ಅಲ್ಲದೆ ಇವರನ್ನು ಹೆಚ್ಚು ಇಷ್ಟಪಡುವ ಪುರುಷರು ಅವರಿಗೆ ಇಷ್ಟವಾಗಿರುತ್ತಾರೆ.


* ವೃಷಭ : ಯಾವ ಪುರುಷರು ತಮ್ಮ ಕೆಲಸದ ಬಗ್ಗೆ ಹೆಚ್ಚು ಉತ್ಸುಕತೆಯಾಗಿದ್ದು ಜೀವನದ ಉದ್ದೇಶಗಳನ್ನು ತಿಳಿದುಕೊಂಡಿರುತ್ತಾರೋ ಅಂಥವರು ವೃಷಭ ರಾಶಿಯ ಮಹಿಳೆಯರಿಗೆ ತುಂಬಾ ಇಷ್ಟವಾಗುತ್ತಾರೆ .


*ಮಿಥುನ : ಅವರು ಸಾಹಸಮಯ ಕೆಲಸಗಳನ್ನು  ಮಾಡುವವರನ್ನು ಇಷ್ಟಪಡುವ ಜನರತ್ತ ಬೇಗನೆ ಆಕರ್ಷಿತರಾಗುತ್ತಾರೆ .
*ಕರ್ಕ: ನಿಮಗೆ ಆಕರ್ಷಕ ಹಾಗೂ ಭಾವನಾತ್ಮಕ ಆಸರೆ ನೀಡುವ ಹುಡುಗ ಇಷ್ಟವಾಗುತ್ತಾನೆ.


*ಸಿಂಹ : ನಿಮಗೆ ಬುದ್ಧಿವಂತ ಹಾಗೂ ರಚನಾತ್ಮಕ ವ್ಯಕ್ತಿ ಇಷ್ಟವಾಗುತ್ತಾನೆ.


* ಕನ್ಯಾ ರಾಶಿಯವರಿಗೆ ಭಾವನಾತ್ಮಕ ಮತ್ತು ಕಲಾತ್ಮಕ ಅಭಿವ್ಯಕ್ತಿ ಇರುವ ಪುರುಷರು ಇಷ್ಟವಾಗುತ್ತಾರೆ.

*ತುಲಾ: ಶಕ್ತಿ ಆತ್ಮವಿಶ್ವಾಸ ಮತ್ತು ಪ್ರೇರಣೆ ನೀಡುವ ವ್ಯಕ್ತಿಗಳು  ಈ ರಾಶಿಯ ಮಹಿಳೆಯರನ್ನು ಆಕರ್ಷಿಸುತ್ತಾರೆ.

*ವೃಶ್ಚಿಕ : ನಿಮಗೆ ಸ್ನೇಹಶೀಲ ಮತ್ತು ಧೈರ್ಯಶಾಲಿ ಸಂಗಾತಿ ಇಷ್ಟವಾಗುತ್ತಾರೆ . ಎಂತಹ ಕಷ್ಟದ ಪರಿಸ್ಥಿತಿಯಲ್ಲಿಯೂ ಹಿಂದೇಟು ಹಾಕದೇ ದೃಢತೆಯಿಂದ ನಿಮ್ಮ ಜೊತೆ ನಿಲ್ಲುವ ವ್ಯಕ್ತಿ.  


*ಧನು : ನಿಮಗೆ ಬುದ್ಧಿವಂತ ಹಾಗೂ ಎಲ್ಲವನ್ನೂ ಬಿಚ್ಚು ಮನಸ್ಸಿನಿಂದ ಮಾತನಾಡುವಂತಹ ವ್ಯಕ್ತಿ ಇಷ್ಟವಾಗುತ್ತಾರೆ.


*ಮಕರ: ನೀವು ಯಾವಾಗಲೂ ಕೆಲಸದಲ್ಲಿ ವ್ಯಸ್ತರಾಗಿರುತ್ತೀರಿ. ಆದುದರಿಂದ ಬೆಂಬಲ ನೀಡುವ ಪುರುಷರು ನಿಮಗೆ ಇಷ್ಟವಾಗುತ್ತಾರೆ.


*ಕುಂಭ: ನೀವು ಸದಾ ಕಾಲ ಕನಸಿನಲ್ಲಿ ತೇಲಾಡುವ ಹಾಗೂ ಪದೇ ಪದೇ ನಿಮ್ಮ ಮನಸ್ಸನ್ನು ಬದಲಾಯಿಸುವ ವ್ಯಕ್ತಿಯಾಗಿರುತ್ತೀರಿ. ಆದುದರಿಂದ ನಿಮಗೆ ಬಲವಾಗಿ ಹಾಗೂ ನಿಮ್ಮನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳುವ ವ್ಯಕ್ತಿ ಇಷ್ಟವಾಗುತ್ತಾರೆ.


*ಮೀನ : ನಿಮ್ಮ ಕನಸಿನ ಲೋಕದಿಂದ ನಿಮ್ಮನ್ನು ಹೊರಗೆ ತರುವಂತಹ  ಬುದ್ಧಿವಂತ, ಸ್ಥಿರವಾದ, ಸಹಾಯಹಸ್ತ ಪ್ರಕೃತಿಯ ಸ್ವಭಾವವುಳ್ಳ ವ್ಯಕ್ತಿಯತ್ತ ಆಕರ್ಷಿತರಾಗುತ್ತೀರ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ