ಪ್ರಧಾನಿ ಮೋದಿ ಬಳಿ ಚರ್ಚಿಸುವ ಕುರಿತು ಯೂಟರ್ನ್ ಹೊಡೆದ ಸಿಎಂ ಬಿಎಸ್ ಯಡಿಯೂರಪ್ಪ

ಶನಿವಾರ, 7 ಸೆಪ್ಟಂಬರ್ 2019 (13:13 IST)
ಬೆಂಗಳೂರು : ರಾಜ್ಯದ ಪ್ರವಾಹ ಪರಿಸ್ಥಿತಿಯ ಬಗ್ಗೆ ಪ್ರಧಾನಿ ಮೋದಿ ಬಳಿ ಚರ್ಚಿಸುವ ಕುರಿತು ಸಿಎಂ ಬಿಎಸ್ ಯಡಿಯೂರಪ್ಪ ಯುಟರ್ನ್ ಹೊಡೆದಿದ್ದಾರೆ ಎನ್ನಲಾಗಿದೆ.
ಇಂದು ಪ್ರಧಾನಿ ಮೋದಿಯನ್ನು ಭೇಟಿ ಮಾಡೋದಾಗಿ ಹೇಳಿದ್ದ ಬಿಎಸ್ ಯಡಿಯೂರಪ್ಪ. ರಾಜ್ಯದ ಪ್ರವಾಹ ಪರಿಸ್ಥಿತಿ ಅರ್ಥ ಮಾಡಿಸುವುದಾಗಿ ಹೇಳಿದ್ದರು. ಆದರೆ ಇದೀಗ ಪ್ರಧಾನಿಯನ್ನ ಸ್ವಾಗತಿಸಿ, ಬೀಳ್ಕೋಟ್ರೂ ಪರಿಹಾರದ ಬಗ್ಗೆ ಚರ್ಚಿಸಲು ನಿರ್ಲಕ್ಷ್ಯ ತೋರಿದ್ದಾರೆ ಎನ್ನಲಾಗಿದೆ.


ಈ ಬಗ್ಗೆ ಮಾತನಾಡಿದ ಸಿಎಂ ಬಿಎಸ್ ವೈ, ಈಗಾಗಲೇ ಅಮಿತ್ ಶಾ, ನಿರ್ಮಲಾ ಸೀತಾರಾಮ್ ಬಂದು ಹೋಗಿದ್ದಾರೆ. ವಾಸ್ತವಿಕ ಪರಿಸ್ಥಿತಿ ಅವರಿಗೆ ಗೊತ್ತಿದೆ. ಸೂಕ್ತ ಪರಿಹಾರ ಸಿಗುತ್ತೆ. ಈ ಮೂಲಕ ಪ್ರಧಾನಿ ಬಳಿ ಪರಿಹಾರದ ಬಗ್ಗೆ ಚರ್ಚಿಸಿಲ್ಲವೆಂದು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ