ಹೌದು. ಲಕ್ಷ್ಮೀದೇವಿ ಮನೆಯಲ್ಲಿ ನೆಲೆಸಿರಬೇಕೆಂದು ಅನೇಕ ಪೂಜೆ, ಹೋಮಹವನಗಳನ್ನು ಮಾಡುತ್ತಾರೆ. ಆದರೆ ಮನೆಯಲ್ಲಿ ಎರಡು ಶಿವಲಿಂಗ ಇರುವುದು ಮತ್ತು ಮೂರು ಗಣೇಶನ ಫೋಟೋ ಅಥವಾ ಚಿಕ್ಕ ಮೂರ್ತಿಗಳಿರಬಾರದು, ಇದು ಅಶುಭಕರ, ಒಂದು ವೇಳೆ ಯಾವ ಮನೆಯಲ್ಲಿ ಒಡೆದ ಮೂರ್ತಿ ಅಥವಾ ಫೋಟೋಗಳ ಪೂಜೆ ನಡೆಯುತ್ತದೆ ಅಲ್ಲಿ ತಾಯಿಯ ಆಗಮನ ಆಗುವುದಿಲ್ಲವಂತೆ. ಆದ್ದರಿಂದ ಒಡೆದ ಮೂರ್ತಿಗಳನ್ನು ಹರಿವ ನೀರಲ್ಲಿ ತೇಲಿಬಿಡಿ
ಅಷ್ಟೇ ಅಲ್ಲದೇ ದೇವರಿಗೆ ಸಕ್ಕರೆ ತುಪ್ಪ ನೈವೇದ್ಯ ಅರ್ಪಿಸುವಾಗ ಕೈಯಿಂದ ಕೊಡಬೇಡಿ, ಚಮಚವನ್ನು ಬಳಸಬೇಕು, ಈ ರೀತಿಯ ನಿಯಮ ಪಾಲಿಸಿದರೆ ಲಕ್ಷ್ಮೀದೇವಿ ಅನುಗ್ರಹ ದೊರೆಯುತ್ತದೆಯಂತೆ. ಹಾಗೇ ತಾಮ್ರದ ಲೋಟದಲ್ಲಿ ಅಥವಾ ಪಾತ್ರೆಯಲ್ಲಿ ಹಾಲು ಮತ್ತು ಮೊಸರನ್ನು ಇಡಬಾರದಂತೆ. ಇದರಿಂದ ಲಕ್ಷ್ಮೀದೇವಿ ಕೋಪಗೊಳ್ಳುತ್ತಾಳಂತೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ