ಮಕ್ಕಳನ್ನು ಇಸುಬು ರೋಗದಿಂದ ದೂರವಿರಲು ಈ ಎಣ್ಣೆಗಳನ್ನು ಹಚ್ಚಿ

ಶುಕ್ರವಾರ, 19 ಏಪ್ರಿಲ್ 2019 (09:43 IST)
ಬೆಂಗಳೂರು : ಇಸುಬು ಚರ್ಮ ರೋಗಗಳಲ್ಲಿ ಒಂದು. ಒಣಗಿದ ಚರ್ಮ ಇರುವವವರಲ್ಲಿ ಬಹುತೇಕವಾಗಿ ಈ ಇಸುಬು ಕಾಣಿಸಿಕೊಳ್ಳುತ್ತದೆ. ಇದು ಬಹುತೇಕವಾಗಿ ಮಕ್ಕಳಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತದೆ. ಇಸುಬುವಿನಿಂದ ದೂರ ಉಳಿಯಲು ಈ ಎಣ್ಣೆಗಳನ್ನು ಬಳಸಿ.


ಇಸುಬುವಿಂದ ದೂರವಿರಲು ಚರ್ಮ ಒಣಗದಂತೆ ನೋಡಿಕೊಳ್ಳಿ. ಮೃದುವಾದ ಟವಲ್ ತೆಗೆದುಕೊಂಡು ಅದಕ್ಕೆ ಮಾಯಿಶ್ಚರೈಸರ್ ಹಚ್ಚಿ ಆಗಾಗ ಚರ್ಮದ ಮೇಲಿಡುತ್ತಿರಿ. ಅಲ್ಲದೇ  ಸೂರ್ಯಕಾಂತಿ ಬೀಜದ ಎಣ್ಣೆಯನ್ನು ಹಚ್ಚಿಕೊಳ್ಳಿ. ಇದು ಚರ್ಮದ ಉರಿಯೂತವನ್ನು ಕಡಿಮೆ ಮಾಡಲಿದ್ದು, ನವೆಯನ್ನು ಕಡಿಮೆ ಮಾಡುತ್ತದೆ. ಇದರಿಂದ ಇಸುಬು ಬರುವುದಿಲ್ಲ.


ಅಲ್ಲದೇ ಕೊಬ್ಬರಿ ಎಣ್ಣೆ ಹಾಗೂ ಸೂರ್ಯಕಾಂತಿ ಬೀಜದ ಎಣ್ಣೆಯನ್ನು ಮಿಶ್ರಣ ಮಾಡಿ ಚರ್ಮಕ್ಕೆ ಹಚ್ಚುವುದರಿಂದ ಚರ್ಮ ಸಮಸ್ಯೆಗಳು ದೂರಾಗುತ್ತವೆ. ಚರ್ಮದ ತುರಿಕೆ ಕೂಡ ಕಡಿಮೆಯಾಗುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.


 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ