ಪ್ರತಿದಿನ ಎಷ್ಟು ಪ್ರಮಾಣದಷ್ಟು ಅರಶಿನ ಸೇವಿಸಿದರೆ ಆರೋಗ್ಯಕ್ಕೆ ಒಳ್ಳೆಯದು ಗೊತ್ತಾ?
ಶನಿವಾರ, 20 ಏಪ್ರಿಲ್ 2019 (12:32 IST)
ಬೆಂಗಳೂರು : ಅರಶಿನ ಆರೋಗ್ಯಕ್ಕೆ ಉತ್ತಮ ಎಂಬುದು ಎಲ್ಲರಿಗೂ ತಿಳಿದೆ ಇದೆ. ಆದರೆ ಅತಿಯಾಗಿ ಸೇವಿಸಿದರೆ ಅಮೃತವೂ ವಿಷ ಎಂಬಂತೆ ಅರಶಿನವನ್ನು ಸರಿಯಾದ ಪ್ರಮಾಣದಲ್ಲಿ ಸೇವಿಸಿದರೆ ಮಾತ್ರ ಅದು ಆರೋಗ್ಯಕ್ಕೆ ಉಪಯೋಗಕಾರಿಯಾಗಿದೆ. ಇಲ್ಲವಾದರೆ ಅದರಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಬಹುದು.
ಅರಿಶಿನದಲ್ಲಿರುವ ಕುರ್ಕ್ಯುಮಿನ್ ಎಂಬ ಮೂಲಭೂತ ಅಂಶವೇ ಅರಿಶಿನದ ಔಷಧೀಯ ಗುಣಕ್ಕೆ ಪ್ರಮುಖ ಕಾರಣವಾಗಿದೆ. ಇದನ್ನು ದಿನಕ್ಕೆ ಎಷ್ಟು ಪ್ರಮಾಣದಲ್ಲಿ ಸೇವಿಸಬೇಕು ಎಂಬುದನ್ನು ತಿಳಿದುಕೊಂಡಿರಬೇಕು. ಇಲ್ಲವಾದಲ್ಲಿ ದುಷ್ಪರಿಣಾಮ ಬೀರುವ ಸಂಭವವಿರುತ್ತದೆ.
ದೇಹದಲ್ಲಿನ ರೋಗ ನಿರೋಧಕ ಶಕ್ತಿ ವೃದ್ಧಿಸಲು ಒಬ್ಬ ವ್ಯಕ್ತಿಗೆ ಪ್ರತಿದಿನ 500 ರಿಂದ 1000 ಮಿಲಿಗ್ರಾಂ ನಷ್ಟು ಕುರ್ಕ್ಯುಮಿನ್ ಬೇಕಾಗುತ್ತದೆ. ಈಗ ತಾನೆ ತಯಾರಿಸಿದ ಒಂದು ಟೀಸ್ಪೂನ್ ತಾಜಾ ಅರಿಶಿನ ಪುಡಿಯಲ್ಲಿ ಅಂದಾಜು 200 ಮಿಲಿಗ್ರಾಂ ಕುರ್ಕ್ಯುಮಿನ್ ಇರುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.