ವರಮಹಾಲಕ್ಷ್ಮಿ ಹಬ್ಬದ ದಿನಾಂಕ, ಪೂಜಾ ಮುಹೂರ್ತ ತಿಳಿಯಿರಿ
2025 ರ ವರಮಹಾಲಕ್ಷ್ಮಿ ಹಬ್ಬ ಇದೇ ಶುಕ್ರವಾರ ಅಂದರೆ ಆಗಸ್ಟ್ 8 ರಂದು ಇದೆ. ಶ್ರಾವಣ ಮಾಸದ ಮಹತ್ವದ ಹಬ್ಬಗಳಲ್ಲಿ ವರಮಹಾಲಕ್ಷ್ಮಿ ಹಬ್ಬವೂ ಒಂದು. ಲಕ್ಷ್ಮೀ ದೇವಿಯನ್ನು ಭಕ್ತಿಯಿಂದ ಪೂಜಿಸುವ ಮೂಲಕ ಜೀವನದಲ್ಲಿ ಸುಖ, ಸಮೃದ್ಧಿ ಬರಲಿ ಎಂದು ಪ್ರಾರ್ಥಿಸುತ್ತೇವೆ.
ಶುಕ್ರವಾರ ಹಲವರು ಮನೆಯಲ್ಲಿ ಲಕ್ಷ್ಮೀ ದೇವಿಯ ಪ್ರತಿರೂಪ ಕೂರಿಸಿ ಕಲಶವಿಟ್ಟು ಪೂಜೆ ಮಾಡುತ್ತಾರೆ. ಈ ರೀತಿ ಲಕ್ಷ್ಮೀ ದೇವಿಯನ್ನು ಕೂರಿಸಿದರೆ ಮೂರು ಹೊತ್ತೂ ಮಂಗಳಾರತಿ ಮಾಡಿ ಪೂಜೆ ಮಾಡಬೇಕು. ಪೂಜೆ ಮಾಡಲು ಶುಭ ಮುಹೂರ್ತ ಇಲ್ಲಿದೆ.