ದಾರಿದ್ರ್ಯವನ್ನು ದೂರಮಾಡಲು ಶುಕ್ರವಾರದಂದು ಈ ದೀಪ ಹಚ್ಚಿ

ಶುಕ್ರವಾರ, 19 ಫೆಬ್ರವರಿ 2021 (06:23 IST)
ಬೆಂಗಳೂರು : ಕೆಲವರಿಗೆ ಜೀವನದಲ್ಲಿ ದಾರಿದ್ರ್ಯ ಆವರಿಸುತ್ತದೆ. ಇದರಿಂದ ಅವರು ಜೀವನದ್ದುದ್ದಕ್ಕೂ ಕಷ್ಟಗಳನ್ನು ಅನುಭವಿಸುತ್ತಾರೆ. ಜೀವನದಲ್ಲಿ ಏಳಿಗೆಯಾಗುವುದಿಲ್ಲ. ಈ ಸಮಸ್ಯೆಯನ್ನು ನಿವಾರಿಸಲು ಶುಕ್ರವಾರದಂದು ಈ ದೇವಿಯನ್ನು ಪೂಜಿಸಿ ಈ ದೀಪ ಹಚ್ಚಿ.

ಶುಕ್ರವಾದಂದು ಮನೆಯ ಗೃಹಿಣಿ ಸ್ನಾನ ಮಾಡಿ ಸಾಂಪ್ರಾದಾಯಿಕ ಉಡುಗೆಯನ್ನು ತೊಟ್ಟು ಅರಶಿನ ಕುಂಕುಮ, ಬಳೆ, ಹೂವನ್ನು ಧರಿಸಿ ದುರ್ಗಾದೇವಿಗೆ ಹೂವಿನಿಂದ ಅಲಂಕರಿಸಿ ಪೂಜೆ ಮಾಡಿ ಹಾಲನ್ನವನ್ನು ನೈವೇದ್ಯವಾಗಿ ಇಟ್ಟು ತುಪ್ಪದ ದೀಪವನ್ನು ಹಚ್ಚಿ. ತುಪ್ಪಕ್ಕೆ ಲಕ್ಷ್ಮೀದೇವಿ ಆಕರ್ಷಿತಳಾಗುವುದರಿಂದ  ದಾರಿದ್ರ್ಯ ದೂರವಾಗುತ್ತದೆ. ಹಣಕಾಸಿನ ಸಮಸ್ಯೆ, ಅನಾರೋಗ್ಯ ಸಮಸ್ಯೆ ನಿವಾರಣೆಯಾಗುತ್ತದೆ. ಮನೆಯಲ್ಲಿ ಶಾಂತಿ ನೆಮ್ಮದಿ ಸಿಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ