ಈ ಸಮಯದಲ್ಲಿ ಹಣ ಹೂಡಿಕೆ ಮಾಡಿದರೆ ಧನನಷ್ಟವಾಗುವುದು ಖಂಡಿತ

ಭಾನುವಾರ, 10 ಮಾರ್ಚ್ 2019 (06:56 IST)
ಬೆಂಗಳೂರು : ಪ್ರತಿಯೊಬ್ಬರು ತಮ್ಮ ಮುಂದಿನ ಜೀವನಕ್ಕಾಗಿ ಹಣವನ್ನು ಉಳಿತಾಯ ಮಾಡುತ್ತಾರೆ. ಬ್ಯಾಂಕ್ ಖಾತೆಗೆ ಹಣ ಹಾಕಿಡುತ್ತಾರೆ, ಜೀವ ವಿಮೆ ಮಾಡುತ್ತಾರೆ, ಬಡ್ಡಿಗಾಗಿ ಸಾಲ ನೀಡುತ್ತಾರೆ, ಹೀಗೆ ಅನೇಕ ರೀತಿಯಲ್ಲಿ ಹಣವನ್ನು ಉಳಿತಾಯ ಮಾಡುತ್ತಾರೆ.


ಈ ರೀತಿ ಹೂಡಿಕೆ ಮಾಡಿದ ಹಣ ವೃದ್ಧಿಯಾಗಲು ಒಳ್ಳೇಯ ಸಮಯ, ದಿವಸ ನೋಡಿದರೆ ಉತ್ತಮ. ಕೆಲವೊಂದು ವಾರ, ತಿಥಿ, ಮಾಸದಲ್ಲಿ ಹನ ಹೂಡಿಕೆ ಮಾಡುವುದು ಒಳ್ಳೆಯದಲ್ಲ. ಆದ್ದರಿಂದ ಯಾವ ದಿನ, ಸಮಯದಲ್ಲಿ ಹಣ ಹೂಡಿಕೆ ಮಾಡುವುದು ಉತ್ತಮ ಎಂಬುದನ್ನು ತಿಳಿದುಕೊಳ್ಳಿ.


ಕೃಷ್ಣಪಕ್ಷದ ತೃತೀಯ, ಷಷ್ಠಿ, ಸಪ್ತಮಿ, ಅಷ್ಠಮಿ, ದಶಮಿ, ಏಕಾದಶಿ, ದ್ವಾದಶಿ ಹಾಗೆ ಶುಕ್ಲ ಪಕ್ಷದ ತೃತೀಯ, ಷಷ್ಠಿ, ಸಪ್ತಮಿ, ಅಷ್ಠಮಿ, ತ್ರಿಯೋದಶಿ ತಿಥಿಯ ಜೊತೆಗೆ ಸೋಮವಾರ, ಭಾನುವಾರ, ಶನಿವಾರದ ಜೊತೆಗೆ ಅಶ್ವಿನಿ, ಪುನರ್ವಸು, ಪುಷ್ಯ, ಚಿತ್ರಾ, ಅನುರಾಧಾ, ಶ್ರವಣ, ಧನಿಷ್ಠ, ರೇವತಿ ಈ ಯಾವುದಾದ್ರೂ ಒಂದು ನಕ್ಷತ್ರದಲ್ಲಿ ಜಮಾ ಮಾಡಿದ ಹಣದಿಂದ ಧನವೃದ್ಧಿಯಾಗುತ್ತದೆ.


ಬಡ್ಡಿಗಾಗಿ ಸಾಲ ನೀಡುವ ವೇಳೆ ಕೂಡ ಸಮಯ ನೋಡುವುದು ಒಳ್ಳೆಯದು. ಕೃಷ್ಣಪಕ್ಷದ ತೃತೀಯ, ಷಷ್ಠಿ, ಸಪ್ತಮಿ, ಅಷ್ಠಮಿ, ದಶಮಿ, ಏಕಾದಶಿ, ದ್ವಾದಶಿ ಹಾಗೂ ಶುಕ್ಲಪಕ್ಷದ ತೃಯೋದಶಿಯಂದು ಸಾಲ ನೀಡಬೇಕು. ಈ ತಿಥಿಗಳು ಅಶ್ವಿನಿ, ಪುನರ್ವಸು, ಚಿತ್ರಾ, ಅನುರಾಧಾ, ಮೃಗಶಿರ, ಪುಷ್ಯ, ಶ್ರವಣ, ಧನಿಷ್ಠ, ಶತಬಿಶಾ ಹಾಗೂ ರೇವತಿ ಇವುಗಳಲ್ಲಿ ಯಾವುದಾದ್ರೂ ಒಂದು ನಕ್ಷತ್ರದಲ್ಲಿ ಬಂದ್ರೆ ಬಹಳ ಒಳ್ಳೆಯದು. ಶನಿವಾರ, ಶುಕ್ರವಾರ ಹಾಗೂ ಸೋಮವಾರ ಒಳ್ಳೆಯ ವಾರ.


ಹಣದ ವ್ಯವಹಾರ,ಠೇವಣಿ ಸಂಗ್ರಹ ಇತ್ಯಾದಿಗಳಿಗೆ ಮಂಗಳವಾರ, ಸಂಕ್ರಾಂತಿಯ ದಿನ, ಸಂಕ್ರಾಂತಿ ಜೊತೆ ಭಾನುವಾರ ಬಂದಲ್ಲಿ, ಜೊತೆಗೆ ಮೂಲಾ ನಕ್ಷತ್ರ, ಜೇಷ್ಠ, ವೈಶಾಖ, ಕೃತಿಕಾ ಸೇರಿದಂತೆ ಕೆಲ ನಕ್ಷತ್ರಗಳಲ್ಲಿ ಮಾಡಬಾರದು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ