ನವದೆಹಲಿ : ಬಡವರು ಉಳಿತಾಯ ಖಾತೆ ಹೊಂದಿರಬೇಕು ಎಂಬ ಉದ್ದೇಶದಿಂದ ಭಾರತೀಯ ಸ್ಟೇಟ್ ಬ್ಯಾಂಕ್ ಹೊಸ ಯೋಜನೆಯೊಂದನ್ನು ಜಾರಿಗೆ ತಂದಿದೆ.
ಈ ಯೋಜನೆಯ ಮೂಲಕ ಇನ್ನು ಮುಂದೆ ಎಸ್.ಬಿ..ನಲ್ಲಿ ಶೂನ್ಯ ಮೊತ್ತದ ಖಾತೆ ತೆರೆಯಬಹುದು. ಇದರ ಜೊತೆಗೆ ರುಪೇ ಡೆಬಿಟ್ ಕಾರ್ಡ್ ಅನ್ನು ಸಹ ಎಸ್.ಬಿ.ಐ. ಕೊಡಲಿದೆ. ಇದ್ಯಾವುದಕ್ಕೂ ಶುಲ್ಕವನ್ನು ವಿಧಿಸಲಾಗುವುದಿಲ್ಲ.
ಎಸ್.ಬಿ.ಐ.ನ ಎಲ್ಲಾ ಶಾಖೆಯಲ್ಲೂ ಈ ಸೌಲಭ್ಯ ಲಭ್ಯವಿದೆ. ಕೆವೈಸಿ ದಾಖಲೆ ನೀಡಿದ ಬಳಿಕ ಬೇಸಿಕ್ ರುಪೇ ಎಟಿಎಂ ಕಮ್ ಡೆಬಿಟ್ ಕಾರ್ಡ್ ಅನ್ನು ನೀಡಲಾಗುತ್ತದೆ. ಇದಕ್ಕೆ ಯಾವುದೇ ಶುಲ್ಕ ಇರುವುದಿಲ್ಲ. ಎಂದು ಬ್ಯಾಂಕ್ ತಿಳಿಸಿದೆ.
ಆದರೆ ಈ ಯೋಜನೆಯಲ್ಲಿ ಗ್ರಾಹಕ ತಿಂಗಳಲ್ಲಿ ನಾಲ್ಕು ಬಾರಿ ಮಾತ್ರ ಎಟಿಎಂನಲ್ಲಿ ಹಣವನ್ನು ವಿತ್ ಡ್ರಾ ಮಾಡಬಹುದು. ಜೊತೆಗೆ ಆರ್ಟಿಜಿಎಸ್, ಎನ್‌ಇಎಫ್ಟಿ, ಕ್ಲಿಯರಿಂಗ್, ಬ್ರಾಂಚ್ ಕ್ಯಾಶ್ ವಿತ್ಡ್ರಾವಲ್ ಸೇರಿ ಇನ್ನಿತರ ಸೌಲಭ್ಯಕ್ಕೂ ಯಾವುದೇ ಶುಲ್ಕ ಇರುವುದಿಲ್ಲ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.