ದುರ್ಗೆಯ ನಾಲ್ಕನೇ ರೂಪ ಕೂಷ್ಮಾಂಡ ದೇವಿ. ಕೂಷ್ಮಾಂಡ ದೇವಿಯ ಮುಖದಲ್ಲಿ ತಾಯಿ ಕಳೆ ಎದ್ದು ಕಾಣುತ್ತದೆ. ಆಕೆಯನ್ನು ಪೂಜೆ ಮಾಡುವುದರಿಂದ ಮಾನಸಿಕವಾಗಿ ಅತೀವ ಸಂತೋಷ ಉಂಟುಮಾಡುತ್ತದೆ. ಕೈಯಲ್ಲಿ ಬಿಲ್ಲು ಬಾಣ, ಮಕರಂದ ತುಂಬಿದ ಮಡಕೆ, ಕಮಲದ ಹೂ, ಚಕ್ರ, ಗದೆ ಎಲ್ಲವನ್ನೂ ಹಿಡಿದಿದ್ದರೂ ತಾಯಿ ಅತ್ಯಂತ ಪ್ರಸನ್ನವದನಳಾಗಿರುತ್ತಾಳೆ.