ಸರಸ್ವತಿ ದೇವಿ ಎಂದರೆ ಪುಸ್ತಕ, ವಿದ್ಯೆಯ ಅಧಿ ದೇವತೆ. ಹೀಗಾಗಿ ವಿಶೇಷವಾಗಿ ಈ ದಿನ ವಿದ್ಯಾರ್ಥಿಗಳು ದೇವಿಯ ಆರಾಧನೆ ಮಾಡುವುದರಿಂದ ಜೀವನದಲ್ಲಿ ಯಶಸ್ಸು ಕಾಣುತ್ತಾರೆ. ಕೇವಲ ವಿದ್ಯಾಭ್ಯಾಸ ಮಾತ್ರವಲ್ಲದೆ, ಸಂಗೀತ, ಕಲೆ, ಜ್ಞಾನ ವೃದ್ಧಿಗಾಗಿ ಇಂದು ಸರಸ್ವತಿಯ ಆರಾಧನೆ ಮಾಡಬೇಕು.
ನವರಾತ್ರಿಯ 7 ನೇ ದಿನದಿಂದ ಸರಸ್ವತಿಯ ಆರಾಧನೆ ಆರಂಭವಾಗುತ್ತದೆ. ಏಳನೇ ದಿನ ಪುಸ್ತಕವನ್ನು ದೇವರ ಮುಂದಿಟ್ಟು ಪೂಜೆ ಮಾಡಲಾಗುತ್ತದೆ. ಸರಸ್ವತಿಯ ವಿದ್ಯಾ-ಬುದ್ಧಿ ಪ್ರದಾಯನಿಯಾಗಿದ್ದು, ಸೃಜನಶೀಲತೆ ಅಭಿವೃದ್ಧಿಯಾಗುತ್ತದೆ. ಇಂದು ವಿದ್ಯಾರ್ಥಿಗಳು ತಪ್ಪದೇ ಈ ಶ್ಲೋಕವನ್ನು ಹೇಳಿ.