ಕಾಲರಾತ್ರಿಯು ಶನಿ ಗ್ರಹದ ಅಧಿದೇವತೆಯಾಗಿದ್ದಾಳೆ. ಜನರು ಮಾಡುವ ಪಾಪ-ಪುಣ್ಯ ಕೃತ್ಯಗಳಿಗೆ ಅನುಗುಣವಾಗಿ ಆಕೆ ಭಕ್ತರಿಗೆ ವರವನ್ನು ನೀಡುತ್ತಾಳೆ. ರಕ್ತಬೀಜಾಸುರನನ್ನು ಕೊಂದು ಆತನ ರಕ್ತದ ಒಂದು ಹನಿಯೂ ಭೂಮಿಗೆ ಬೀಳದಂತೆ ನೋಡಿಕೊಂಡ ಬಳಿಕ ಆಕ್ರೋಶದಿಂದ ನರ್ತಿಸುತ್ತಾಳೆ. ಅದೇ ಆಕ್ರೋಶದಲ್ಲಿ ಅರಿಯದೇ ಶಿವನ ಎದೆಯ ಮೇಲೆ ಕಾಲಿಡುತ್ತಾಳೆ. ಬಳಿಕ ಸಹಜಸ್ಥಿತಿಗೆ ಬರುವ ಆಕೆ ತನ್ನ ಕೃತ್ಯಕ್ಕೆ ಪಶ್ಚಾತ್ತಾಪ ಪಡುತ್ತಾಳೆ.
ಶನಿ ದೋಷವಿರುವವರು ಕಾಲರಾತ್ರಿ ದೇವಿಯ ಪೂಜೆ ಮಾಡುವುದರಿಂದ ಪರಿಹಾರ ಸಿಗುವುದು. ಆಕೆಯನ್ನು ಪೂಜೆ ಮಾಡುವುದರಿಂದ ಅಗ್ನಿ, ವಾಯು, ಜಲದಿಂದ ಯಾವುದೇ ತೊಂದರೆಯಾಗುವುದಿಲ್ಲ. ಶತ್ರು ಭಯ ನಾಶವಾಗುತ್ತದೆ.