ನವರಾತ್ರಿಯ 7ನೇ ದಿನ ದೇವಿಗೆ ಈ ಹೂ ಹಾಗೂ ನೈವೇದ್ಯ ಅರ್ಪಿಸಿ
ಶುಕ್ರವಾರ, 23 ಅಕ್ಟೋಬರ್ 2020 (08:08 IST)
ಬೆಂಗಳೂರು : ಇಂದು ನವರಾತ್ರಿಯ 7ನೇ ದಿನ. ಈ ದಿನ ಕಾಳರಾತ್ರಿ ದೇವಿಯನ್ನು ಪೂಜಿಸುತ್ತೇವೆ. ಇಂದು ದೇವಿಗೆ ಯಾವ ಹೂಗಳಿಂದ ಹಾಗೂ ಯಾವ ನೈವೇದ್ಯದಿಂದ ಪೂಜಿಸಿದರೆ ಉತ್ತಮ ಎಂಬುದನ್ನು ತಿಳಿದುಕೊಳ್ಳಿ.
ಇಂದು ಲಕ್ಷ್ಮೀ ದೇವಿಯನ್ನು ಹಾಗೂ ನವಗ್ರಹಗಳನ್ನು ಪೂಜಿಸಿದರೆ ದೇವಿಯ ಅನುಗ್ರಹ ನಿಮಗೆ ಸಿಗುತ್ತದೆ. ದೇವಿಗೆ ತುಪ್ಪದ ದೀಪ ಹಚ್ಚಿ ಪೂಜೆ ಮಾಡಿ. ಇದರಿಂದ ದೇವಿ ದುಷ್ಟ ಶಕ್ತಿಗಗಳನ್ನು ಸಂಹರಿಸಿ ನಿಮ್ಮನ್ನ ರಕ್ಷಿಸುತ್ತಾಳೆ. ಕೆಂಪು ಅಥವಾ ಬಿಳಿ ಬಣ್ಣದ ಹೂಗಳಿಂದ ಅಲಂಕಾರವನ್ನು ಮಾಡಿ. ದೇವಿಗೆ ಪೂಜೆ ಮಾಡುವಾಗ ಗಾಢವಾದ ಗುಲಾಬಿ ಬಣ್ಣದ ಬಟ್ಟೆಗಳನ್ನು ಧರಿಸಿ ಅಥವಾ ಅರ್ಪಿಸಿ ದೇವಿಗೆ ಪೂಜೆ ಮಾಡಿ.
ನೀವು ಇಂದು ದೇವಿಗೆ ಬೆಲ್ಲದಿಂದ ಮಾಡಿದ ಪಾಯಸ, ಬೆಲ್ಲದಿಂದ ಮಾಡಿದ ಅನ್ನವನ್ನು ನೈವೇದ್ಯವಾಗಿ ಇಟ್ಟರೆ ಕಾತ್ಯಾಯಿನಿ ದೇವಿಯ ಅನುಗ್ರಹವಾಗುತ್ತದೆ. ನಿಮ್ಮ ಸಮಸ್ಯೆಗಳು ದೂರವಾಗುತ್ತದೆ. ಇಂದು ದೇವಿಯನ್ನು ಪೂಜಿಸುವಾಗ “ಓಂ ಹ್ರೀಂ ಶ್ರೀಂ ಕಾಳರಾತ್ರಿಯೇ ದುರ್ಗಾಯೈ ನಮಃ” ಮಂತ್ರವನ್ನು 3, 11, 21, 108 ಬಾರಿ ಪಠಿಸಿ.