ನವರಾತ್ರಿಯ ಕೊನೆಯ ದಿನ ಸಿದ್ಧಿದಾತ್ರಿಯ ಆರಾಧನೆ ಮಾಡುವ ಭಕ್ತರು ದೇವಿಗೆ ಇವುಗಳನ್ನು ಅರ್ಪಿಸಿ

ಗುರುವಾರ, 18 ಅಕ್ಟೋಬರ್ 2018 (14:42 IST)
ಬೆಂಗಳೂರು : ನವರಾತ್ರಿಯ ಕೊನೆಯ ದಿನವಾದ ಇಂದು ಸಿದ್ಧಿದಾತ್ರಿಯ ಆರಾಧನೆ ಮಾಡಲಾಗುತ್ತದೆ. ಈ ದೇವಿಯ ಪೂಜೆ ಮಾಡಿದರೆ ಸುಖ-ಸಂಪತ್ತು, ಶಾಂತಿ ಪ್ರಾಪ್ತವಾಗಲಿದೆಯಂತೆ.


ಈ ದೇವಿ ಕೇತು ಗ್ರಹದ ಮೇಲೆ ಅಧಿಪತ್ಯ ಸಾಧಿಸಿದ್ದಾಳೆ. ದೇಹ ತ್ಯಾಗ ಮಾಡಿದ ಆತ್ಮ ಸಿದ್ಧಿದಾತ್ರಿಯ ಸ್ವರೂಪವಾಗಿದೆ. ಅರ್ಧನಾರೀಶ್ವರ ರೂಪದಲ್ಲಿ ದೇವಿ ಅವತಾರವೆತ್ತಿದ್ದಾಳೆ. ಅಣಿಮಾ, ಮಹಿಮಾ, ಗರಿಮಾ, ಲಘಿಮಾ, ಪ್ರಾಪ್ತಿ, ಪ್ರಾಕಾಮ್ಯೋ, ಈಶಿತ್ವ ಮತ್ತು ವಶಿತ್ವ ಸಿದ್ಧಿಗಳನ್ನೂ ದಯಪಾಲಿಸುವ ತಾಯಿ ಇವಳು. ಸಿದ್ಧದಾತ್ರಿಗೆ ಚತುರ್ಭುಜಗಳಿವೆ. ಕಮಲದ ಮೇಲೆ ಆಕೆ ಕುಳಿತಿದ್ದಾಳೆ. ಚಕ್ರ, ಶಂಖ, ಗದೆ ಹಾಗೂ ಕಮಲವನ್ನು ಆಕೆ ಧರಿಸಿದ್ದಾಳೆ.


ನವರಾತ್ರಿಯ ಕೊನೆ ದಿನ ಸಿದ್ಧಿದಾತ್ರಿ ಕೃಪೆಗೆ ಪಾತ್ರರಾಗಲು ಭಕ್ತರು ಮೊಸರು ಹಾಗೂ ಮಿಠಾಯಿಯನ್ನು ಅರ್ಪಿಸಬೇಕು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ