ಬೆಂಗಳೂರು : ಸಮುದ್ರದಲ್ಲಿ ಸಿಗುವ ಆಹಾರಗಳಲ್ಲಿ ಏಡಿಯೂ ಒಂದು. ಇದರಿಂದ ತಯಾರಿಸಿದ ಅಡುಗೆ ಸಕತ್ ರುಚಿಯಾಗಿರುತ್ತದೆ. ಹೆಚ್ಚಿನ ಮಾಂಸಹಾರಿಗಳು ಇದನ್ನು ಇಷ್ಟಪಡುತ್ತಾರೆ. ಆದರೆ ಇದು ಆರೋಗ್ಯಕ್ಕೆ ಉತ್ತಮವೇ?ಅಲ್ಲವೇ? ಎಂಬ ಮಾಹಿತಿ ಇಲ್ಲಿದೆ ನೋಡಿ.
ಏಡಿ ಆರೋಗ್ಯಕ್ಕೆ ತುಂಬಾ ಒಳ್ಳೆಯದಂತೆ. ವಾರದಲ್ಲಿ ಎರಡು-ಮೂರು ಸಲವಾದರೂ ಏಡಿ ತಿನ್ನಲು ಡಯಟ್ ತಜ್ಞರು ಶಿಫಾರಸು ಮಾಡುತ್ತಾರೆ. ಯಾಕೆಂದರೆ ಇದು ಮನುಷ್ಯನ ಆರೋಗ್ಯಕ್ಕೆ ಅನಗತ್ಯ ಕೊಬ್ಬು ಸೇರದಂತೆ ಮಾಡಿ, ಅಗತ್ಯ ಪೋಷಕಾಂಶಗಳನ್ನು ಒದಗಿಸುತ್ತದೆ. ಹಾಗೇ ಏಡಿಯನ್ನು ಆಹಾರದ ಶೇ.48ರಷ್ಟು ಸೇವಿಸಿದರೂ, ದೇಹದ ಮೇಲೆ ಯಾವುದೇ ದುಷ್ಪರಿಣಾಮವೂ ಬೀರುವುದಿಲ್ಲವಂತೆ.
ಏಡಿಯಲ್ಲಿ ಕ್ಯಾಲ್ಸಿಯಮ್, ಕಬ್ಬಿಣಾಂಶ, ಫ್ಯಾಟ್, ಪೋಷಕಾಂಶಗಳು, ವಿಟಮಿನ್ ಎ, ಸಿ ಮತ್ತು ಬಿ ಹೊಂದಿದೆ. ಸರಿಸುಮಾರು ಮನುಷ್ಯನ ದೇಹಕ್ಕೆ ಬೇಕಾಗುವ ಎಲ್ಲಾ ಅಂಶಗಳೂ ಈ ಸಮುದ್ರದ ಈ ಆಹಾರದಲ್ಲಿದೆ. ವಿಟಮಿನ್ ಎ ಅಧಿಕವಾಗಿದ್ದು, ಕಣ್ಣಿನ ದೃಷ್ಟಿ ಹೆಚ್ಚಿಸುತ್ತದೆ ಹಾಗು ಕಣ್ಣಿನ ಪೊರೆ ಆಗುವುದನ್ನು ತಪ್ಪಿಸುತ್ತದೆ.ಜೀವಕೋಶಗಳಿಗೆ ಹಾನಿಯಾಗುವುದನ್ನು ತಡೆಯುತ್ತದೆ.
ಏಡಿಯಲ್ಲಿ ಸೆಲೆನಿಯಮ್ ಖನಿಜಗಳು ಹೆಚ್ಚಿರುತ್ತದೆ. ಥೈರಾಡ್ ಅಂಗಗಳನ್ನು ರಕ್ಷಿಸುವುದಲ್ಲದೆ, ಜೀವಕೋಶಗಳನ್ನು ಕಾಪಾಡುತ್ತದೆ. ಹೃದಯ ಕಾಯಿಲೆ ದೂರ,ಕೆಟ್ಟ ಕೊಬ್ಬು ಹೃದಯಘಾತ ಸಂಭವಿಸದಂತೆ ಸಹಾಯ ಮಾಡುತ್ತದೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.ಹೆಚ್ಚಾಗಿ ಜ್ವರ ಮತ್ತು ಅನಾರೋಗ್ಯ ಕಾಡುತ್ತಿರುವವರು ಏಡಿಯನ್ನು ಸೇವಿಸಬೇಕು. ವಿಟಮಿನ್ ಬಿ2 ಚರ್ಮಕ್ಕೆ ಕಾಂತಿ ಹೆಚ್ಚಿಸಿ, ಮೂಡವೆಗೆ ಪರಿಹಾರವಾಗುತ್ತದೆ.ಕ್ಯಾನ್ಸರ್ ಹರಡದಂತೆ ಹಾಗು ಹೆಚ್ಚಾಗದಂತೆ ತಡೆಯುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.