ನೆನಪಿರಲಿ! ಪೂಜೆಯ ಜೊತೆಗೆ ಪೂಜೆಗೆ ಬಳಸುವ ಈ ಸಾಮಾಗ್ರಿಗಳು ಯಾವಾಗಲೂ ಶುದ್ಧವಾಗಿರಲಿ

ಸೋಮವಾರ, 10 ಡಿಸೆಂಬರ್ 2018 (12:27 IST)
ಬೆಂಗಳೂರು : ಪ್ರತಿದಿನ ದೇವರಿಗೆ ಭಯ-ಭಕ್ತಿಯಿಂದ ಪೂಜೆ ಮಾಡುವುದರ ಜೊತೆಗೆ ಪೂಜೆ ಮಾಡುವ ಸಾಮಗ್ರಿಗಳು ಹಾಗೂ ಪೂಜಾ ವಿಧಾನ ಕೂಡ ಸರಿಯಾಗಿರಬೇಕು. ಆಗ ಮಾತ್ರ ದೇವರ ಕೃಪೆ ನಮಗೆ ಸಿಗುತ್ತದೆ.


ದೀಪ ಹಚ್ಚಬೇಕಾದ್ರೆ ಹಾಗೂ ಹೋಮ-ಹವನಗಳಿಗೆ ಶುದ್ಧ ದೇಸಿ ತುಪ್ಪವನ್ನು ಬಳಸಬೇಕು. ವನಸ್ಪತಿ ತುಪ್ಪವನ್ನು ಪೂಜೆಗೆ ಎಂದೂ ಬಳಸಬಾರದು. ಶುದ್ಧವಾದ ಹತ್ತಿಯಿಂದ ತಯಾರಿಸಿದ ಬತ್ತಿಯನ್ನು ಮಾತ್ರ ಬಳಸಬೇಕು. ಹತ್ತಿ ಬತ್ತಿ ಶುಭವಾಗಿದ್ದರೆ ತುಂಬಾ ಹೊತ್ತು ದೀಪ ಉರಿಯುತ್ತದೆ.


ಬಿದಿರಿನಿಂದ ಮಾಡಿದ ಊದುಬತ್ತಿಯನ್ನು ಮನೆಯಲ್ಲಿ ಹಚ್ಚಬಾರದು. ಪೂಜೆ ವೇಳೆ ಇದನ್ನು ಹಚ್ಚುವುದು ಶುಭವಲ್ಲ. ಅಂತ್ಯಸಂಸ್ಕಾರದ ವೇಳೆ ಮಾತ್ರ ಬಿದಿರಿನ ಕಡ್ಡಿಇರುವ ಊದುಬತ್ತಿಯನ್ನು ಹಚ್ಚಬೇಕು. ಹಾಗೇ ಹೋಮ-ಹವನದ ವೇಳೆ ಶುದ್ಧ ವಸ್ತುಗಳನ್ನು ಬಳಸಿ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ