ವ್ಯಕ್ತಿಯಲ್ಲಿ ಸಕಾರಾತ್ಮಕ ಭಾವನೆ ಮೂಡಲು ಈ ಮರದ ಕೆಳಗೆ ಕುಳಿತುಕೊಳ್ಳಿ

ಶುಕ್ರವಾರ, 23 ಏಪ್ರಿಲ್ 2021 (06:34 IST)
ಬೆಂಗಳೂರು : ಮನುಷ್ಯನ ಮೇಲೆ ಸಕಾರಾತ್ಮಕ ಶಕ್ತಿಯ ಪ್ರಭಾವವಾದರೆ ಅವರ ಯೋಚನೆಗಳು ತುಂಬಾ ಉತ್ತಮವಾಗಿರುತ್ತದೆ. ಜೀವನದಲ್ಲಿ ನೆಮ್ಮದಿಯಿಂದ ಇರುತ್ತಾನೆ. ಆದರೆ ವ್ಯಕ್ತಿಯ ನಕಾರಾತ್ಮಕ ಶಕ್ತಿ ಪ್ರಭಾವ ಬೀರಿದರೆ  ಅದರಿಂದ ವ್ಯಕ್ತಿ ಕೆಟ್ಟದನ್ನೇ ಯೋಚಿಸುತ್ತಾನೆ. ಜೀವನದಲ್ಲಿ ಅವನತಿ ಹೊಂದುತ್ತಾನೆ. ಹಾಗಾಗಿ ವ್ಯಕ್ತಿ ಯಾವಾಗಲೂ ಸಕಾರಾತ್ಮಕವಾಗಿ ಯೋಚಿಸಲು ಹೆಚ್ಚಾಗಿ ಈ ಮರದ ಕೆಳಗಡೆ ಕುಳಿತುಕೊಳ್ಳಿ.

*ಬಾಳೆಮರ : ಇದು ವಿದ್ಯಾರ್ಥಿಗಳಿಗೆ ಶುಭವೆಂದು ನಂಬಲಾಗಿದೆ. ವಿದ್ಯಾರ್ಥಿಗಳು ಬಾಳೆಮರದ ಕೆಳಗಡೆ ಅಧ್ಯಯನ ಮಾಡಿದರೆ ಓದಿದ ವಿಷಯಗಳು ಬಹಳ ಬೇಗನೆ ನೆನಪಿನಲ್ಲಿ ಉಳಿಯುತ್ತದೆಯಂತೆ.

*ಬೇವಿನ ಮರ: ಇದು ಸಕಾರಾತ್ಮಕ ಶಕ್ತಿಯನ್ನು ಮೂಡಿಸಲು ಸಹಕಾರಿಯಾಗಿದೆ. ಇದರಲ್ಲಿ ತಾಯಿ ದುರ್ಗಾದೇವಿ ವಾಸವಿದ್ದಾಳೆ ಎನ್ನಲಾಗಿದೆ. ಈ ಮರದ ನೆರಳಿನಲ್ಲಿ ಕುಳಿತರೆ ದುರ್ಗಾದೇವಿಯ ಅನುಗ್ರಹ ದೊರೆತು ಧನಾತ್ಮಕ ಶಕ್ತಿ ಹೆಚ್ಚುತ್ತದೆ ಎಂದು ಹೇಳುತ್ತಾರೆ.

*ಅರಳೀಮರ : ಈ ಮರದ ನೆರಳಿನಲ್ಲಿ ಕುಳಿತರೆ ಧನಾತ್ಮಕ ಶಕ್ತಿ ಪಡೆಯಬಹುದು. ಆದರೆ ಮಧ್ಯಾಹ್ನ ಮತ್ತು ಮುಂಜಾನೆಯ ವೇಳೆ ಈ ವೃಕ್ಷದ ಕೆಳಗೆ ಕುಳಿತುಕೊಳ್ಳಬಾರದು.

*ನೆಲ್ಲಿಮರ : ಈ ಮರವು ಶ್ರೀಹರಿಯ ವಾಸಸ್ಥಳವೆಂದು ಹೇಳುತ್ತಾರೆ. ಹಾಗಾಗಿ ಈ ಮರದ  ಕೆಳಗೆ ಕುಳಿತುಕೊಂಡರೆ ದೇವರ ಅನುಗ್ರಹ ದೊರೆಯುತ್ತದೆ. ಸಂಪತ್ತು ಹೆಚ್ಚಾಗುತ್ತದೆ.

*ಪೇರಳೆ ಮರ : ಈ ಮರದ ಕೆಳಗೆ ಕುಳಿತರೆ ಗಣಪತಿಯ ಅನುಗ್ರಹ ದೊರೆಯುತ್ತದೆಯಂತೆ. ನಮ್ಮ ಎಲ್ಲಾ ಕರ್ಯಗಳು ಯಾವುದೇ ಅಡೆತಡೆಯಿಲ್ಲದೆ ಪೂರ್ಣಗೊಳ್ಳುತ್ತದೆಯಂತೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ