ಪತಿ ಹೊರಗೆ ಹೋಗುವಾಗ ಪತ್ನಿಯ ಈ ಭಾಗವನ್ನು ಸ್ಪರ್ಶಿಸಿದರೆ ಯಶಸ್ಸು ಖಚಿತ
ಗುರುವಾರ, 25 ಜುಲೈ 2019 (06:39 IST)
ಬೆಂಗಳೂರು : ಬಹಳ ಹಿಂದಿನಕಾಲದಿಂದಲೂ ಮನೆಯ ಗೃಹಿಣಿಯನ್ನು ಲಕ್ಷ್ಮೀಯ ಸ್ವರೂಪವೆಂದು ನಂಬಲಾಗಿದೆ. ಆದ್ದರಿಂದ ಮನೆಯಲ್ಲಿ ಗೃಹಿಣಿಯರು ಯಾವುದೇ ಒಂದು ಕೆಲಸ ಮಾಡುವಾಗಲೂ ಎಚ್ಚರಿಕೆಯಿಂದ ಶಾಸ್ತ್ರದ ಪ್ರಕಾರವೇ ಮಾಡಬೇಕು. ಇದರಿಂದ ಆ ಮನೆಯಲ್ಲಿ ಸಂಪತ್ತು ತುಂಬಿತುಳುಕುತ್ತಿರುತ್ತದೆ ಎಂಬ ನಂಬಿಕೆ ಇದೆ.
ಹಾಗೇ ಪತ್ನಿ ಗಂಡನ ಅದೃಷ್ಟದ ಸಂಕೇತವೆಂದು ಹೇಳುತ್ತಾರೆ. ಆದ್ದರಿಂದ ಗಂಡ ಮನೆಯಿಂದ ಹೊರಗೆ ಹೋಗುವಾಗ ಹೆಂಡತಿಯ ಬಲ ಕೈಯನ್ನು ಮುಟ್ಟಿ ಹೋದರೆ, ಹೋದ ಕೆಲಸ ಯಶಸ್ವಿಯಾಗಿ ಆಗುವುದಲ್ಲದೆ, ಹಣದ ಸಂಪಾದನೆ ಹೆಚ್ಚಾಗುತ್ತದೆ.
ಅಲ್ಲದೇ ಪತಿ ಮನೆಯಿಂದ ಹೊರಗೆ ಹೋಗುವಾಗ ಪತ್ನಿಯಾದವಳು ಹಣೆಗೆ ಸಿಂಧೂರ, ಮುಡಿಗೆ ಹೂವು, ಕೈಗೆ ಬಳೆ ಒಟ್ಟಾರೆ ಮುತ್ತೈದೆಯರ ಸ್ವರೂಪದಲ್ಲಿ ದರ್ಶನ ನೀಡಿದರೆ ಗಂಡನಿಗೆ ಹೋದ ಕಡೆ ಯಶಸ್ಸು ಲಭಿಸುತ್ತದೆ ಎನ್ನುತ್ತಾರೆ.